ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲೆಡೆ ಸುದ್ದಿಯಲ್ಲಿದ್ದ ಸಿನಿಮಾ ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ . ಜೂನ್ 16ಕ್ಕೆ ರಿಲೀಸ್ ಆದ ಆದಿಪುರುಷ್ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಅನೇಕರು ಸಿನಿಮಾ ನೋಡಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.
ಸಿನಿಮಾದ ವಿಎಕ್ಸ್‌ಎಫ್, ಡೈಲಾಗ್, ಪಾತ್ರಗಳ ಚಿತ್ರಣ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.
ಈ ನಡುವೆ ಆದಿಪುರುಷ್ ಸಿನಿಮಾಗೆ ಟಕ್ಕರ್ ಕೊಡುವ ಎವರ್‌ಗ್ರೀನ್ ರಾಮಾಯಣ ದೂರದರ್ಶನದಲ್ಲಿ ಮತ್ತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ರಮಾನಂದ್ ಸಾಗರ್ ಅವರ ಜನಪ್ರಿಯ ಕೃಶ್ಯಕಾವ್ಯ ರಾಮಾಯಣವನ್ನು ಶೀಘ್ರದಲ್ಲೇ ಮರುಪ್ರಸಾರ ಮಾಡಲಾಗುವುದು ಘೋಷಿಸಲಾಗಿದೆ. ಅಂದಹಾಗೆ ಜುಲೈ 3ರಿಂದ ಪೈರಾಣಿಕ ಧಾರಾವಾಹಿ ಮತ್ತೆ ಪ್ರೇಕ್ಷಕರ ಮುಂದೆ ಬರಲಿದೆ.
ಆದಿಪುರುಷ್ ರಿಲೀಸ್ ಆದಾಗಿಂದನೂ ರಮಾನಂದ್ ಸಾಗರ್ ಅವರ ರಾಮಾಯಣ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಜನರು ರಾಮಾಯಣ ಧಾರಾವಾಹಿಯನ್ನು ಉದಾಹರಣೆಯಾಗಿ ಇಟ್ಟುಕೊಂಡು ಆದಿಪುರುಷ್ ಸಿನಿಮಾವನ್ನು ತರಾಟೆ ತೆಗೆದುಕೊಂಡಿದ್ದರು.
ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದ ಕೆಲವು ಕಲಾವಿದರೂ ಕೂಡ ಆದಿಪುರುಷ್ ಬಗ್ಗೆ ಬೇಸರ ಹೊರಹಾಕಿದ್ದರು.
ಇದೀಗ ಮುಂದಿನ ಸೋಮವಾರದಿಂದಲೇ (ಜುಲೈ 3) ಮತ್ತೆ 80ರ ದಶಕದ ಸೂಪರ್ ಹಿಟ್ ಪೌರಾಣಿಕ ಟಿವಿ ಶೋ ಮೂಡಿ ಬರಲಿದೆ. ‘ವಿಶ್ವವಿಖ್ಯಾತ ಪೌರಾಣಿಕ ಧಾರಾವಾಹಿ ರಾಮಾಯಣವು ಮತ್ತೆ ವೀಕ್ಷಕರ ಮುಂದೆ ಬರ್ತಿದೆ ‘ ಎಂದು ಈಗಾಗಲೇ ಪ್ರೋಮೊ ರಿಲೀಸ್ ಮಾಡಲಾಗಿದೆ. ಅಂದಹಾಗೆ ಶೆಮರೂ ಟಿವಿ (Shemaroo TV) ವಾಹಿನಿಯಲ್ಲಿ ರಾಮಾಯಣ ಮರುಪ್ರಸಾರವಾಗಲಿದೆ.
ರಾಮಾಯಣದಲ್ಲಿ ಅರುಣ್ ಗೋವಿಲ್ ಮತ್ತು ದೀಪಿಕಾ ಚಿಕ್ಲಿಯಾ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸುನಿಲ್ ಲಾಹಿರಿ ಲಕ್ಷ್ಮಣನಾಗಿ ನಟಿಸಿದ್ದಾರೆ. ಪ್ರೋಮೋ ಶೇರ್ ಮಾಡಿ, ‘ವಿಶ್ವ ಪ್ರಸಿದ್ಧ ಪೌರಾಣಿಕ ಧಾರಾವಾಹಿ ರಾಮಾಯಣವು ಎಲ್ಲಾ ಅಭಿಮಾನಿಗಳು ಮತ್ತು ನಮ್ಮ ಪ್ರೇಕ್ಷಕರಿಗಾಗಿ ಮತ್ತೆ ಬರ್ತಿದೆ. ಜುಲೈ 3, 7.30 ರಿಂದ ನಿಮ್ಮ ನೆಚ್ಚಿನ ಶೆಮರೂ ಟಿವಿಯಲ್ಲಿ ವೀಕ್ಷಿಸಿ’ ಎಂದು ಕ್ಯಾಪ್ಷನ್ ನೀಡಿದ್ದಾರೆ.