CINE | ತೆರೆ ಹಂಚಿಕೊಳ್ಳಲಿದ್ದಾರೆ ರಮೇಶ್‌-ಗಣೇಶ್‌, ಬರ್ಥ್‌ಡೇ ದಿನ ಫ್ಯಾನ್ಸ್‌ಗೆ ಸಿಹಿಸುದ್ದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಮೇಶ್‌ ಅರವಿಂದ್‌ ಹಾಗೂ ಗೋಲ್ಡನ್‌ ಸ್ಟಾರ್‌ ಗಣೇಶ್‌ ಸದ್ಯ ಒಂದೇ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ.

ನಿರ್ದೇಶಕ ವಿಖ್ಯಾತ್ ಎಆರ್, ಮೊದಲ ಬಾರಿಗೆ ಗಣೇಶ್ ಹಾಗೂ ರಮೇಶ್ ಅವರನ್ನು ಒಟ್ಟಿಗೆ ತೆರೆಗೆ ತರುತ್ತಿದ್ದಾರೆ. ಇಬ್ಬರ ಇಮೇಜಿಗೂ ಒಪ್ಪಿಗೆ ಆಗುವ ಕತೆಯೊಂದನ್ನು ನಿರ್ದೇಶಕ ವಿಖ್ಯಾತ್ ತಯಾರಿಸಿಕೊಂಡಿದ್ದು, ಸಿನಿಮಾ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸಿನಿಮಾದ ಹೆಸರು ಮೊದಲ ಲುಕ್ ಆಗಸ್ಟ್ 16ಕ್ಕೆ ತೆರೆಗೆ ಬರಲಿದೆ. ಸಿನಿಮಾವನ್ನು ಸತ್ಯ ರಾಯಲ ನಿರ್ಮಾಣ ಮಾಡಲಿದ್ದಾರೆ.

ಸಿನಿಮಾದ ಘೋಷಣೆಗಾಗಿ ಪೋಸ್ಟರ್ ಒಂದನ್ನು ಇದೀಗ ಬಿಡುಗಡೆ ಮಾಡಿದ್ದು, ಪೋಸ್ಟರ್​ನಲ್ಲಿ ರಮೇಶ್ ಹಾಗೂ ಗಣೇಶ್​ರ ಹಳೆಯ ಚಿತ್ರಗಳನ್ನು ಬಳಸಿಕೊಳ್ಳಲಾಗಿದೆ. ಕಾಗದ ಪತ್ರದ ಮೇಲೆ ಸಿನಿಮಾದ ಘೋಷಣೆ ಮಾಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!