ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ರಾಮೇಶ್ವರಂ ಕಫೆಯಲ್ಲಿ ಅದ ಭೀಕರ ಬಾಂಬ್ ಬ್ಲಾಸ್ಟ್‌ನ ಎಕ್ಸ್ ಕ್ಲೂಸಿವ್ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿದೆ.
ಬ್ಲಾಸ್ಟ್‌ನ ಹೊಡೆತಕ್ಕೆ ಇಡೀ ಕಫೆ ಸಂಪೂರ್ಣವಾಗಿ ಛಿದ್ರವಾಗಿದೆ. ಅದರೊಂದಿಗೆ ಹೊಟೇಲ್ ನ ಸಿಬ್ಬಂದಿಗಳು ಸ್ಥಳದಿಂದ ದಿಕ್ಕಾಪಾಲಗಿ ಓಡಿದ್ದಾರೆ.
Explosion at Bengaluru's Rameshwaram Cafe caught on CCTV camera
(Video source: Police) pic.twitter.com/lhMtK3rsOs
— ANI (@ANI) March 1, 2024
ಸ್ಟೋಟದ ಭಯಾನಕ ದೃಶ್ಯಗಳು ಹೊಟೇಲ್ ಒಳಗಡೆ ಅಳವಡಿಸಿದ್ದ ಎರಡು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 10 ಸೆಕೆಂಡುಗಳಲ್ಲಿ ಎರಡು ಸ್ಫೋಟ ಸಂಭವಿಸಿದೆ. ಈ ವೇಳೆ ಕೆಲವರಿಗೆ ಕಣ್ಣು-ತಲೆಯ ಭಾಗಕ್ಕೆ ಪೆಟ್ಟಾಗಿದೆ. ಯುವತಿಯೊಬ್ಬಳ ಬಟ್ಟೆ ಸುಟ್ಟುಹೋಗಿದೆ. ಸ್ಫೋಟದ ತೀವ್ರತೆಗೆ ನಡುಗಿದ ಗ್ರಾಹಕರು ಗಾಯಾಳುಗಳನ್ನು ಎತ್ತಿಕೊಂಡು ಆಸ್ಪತ್ರೆಗೆ ದೌಡಾಯಿಸಿದ್ದಾರೆ.