ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಲಲಾನ ಪ್ರಾಣಪ್ರತಿಷ್ಠಾಪನೆಗೆ ಗಣ್ಯರ ದಂಡು ಅಯೋಧ್ಯೆ (Ayodhya) ಯತ್ತ ಸಾಗುತ್ತಿದ್ದಾರೆ. ವಿವಿಧ ಕ್ಷೇತ್ರಗಳ ಸಾಧಕರೆಲ್ಲಾ ಆ ಮಹಾನ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿಲಿದ್ದಾರೆ.
ಕರ್ನಾಟಕದಿಂದ ಅಯೋಧ್ಯೆಗೆ ರಾಜ್ಯದ ಪ್ರಮುಖ ಮಠಾಧೀಶರು ಹೊರಟಿದಿದ್ದು, ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ನಿರಂಜನಾನಂದ ಮಹಾಸ್ವಾಮಿಜಿ, ಮಾದರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮೀಜಿ, ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ ಶಾಂತವೀರ ಮಹಾಸ್ವಾಮೀಜಿ, ಸಿದ್ದರಾಮೇಶ್ವರ ಮಹಾ ಸಂಸ್ಥಾನ ಭೋವಿ ಗುರುಪೀಠ ಚಿತ್ರದುರ್ಗದ ಇಮ್ಮಡಿ ಸಿದ್ದರಾಮಯ್ಯ ಮಹಾಸ್ವಾಮೀಜಿ.ಶ್ರೀ ವಾಲ್ಮೀಕಿ ಗುರುಪೀಠ ರಾಜನಳ್ಳಿ ಹರಿಹರದ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಜಿ, ಮಹಾಸ್ವಾಮೀಜಿ ಪಂಚಮಸಾಲಿ ಗುರುಪೀಠ ಹರಿಹರದ ವಚನಾನಂದ ಸ್ವಾಮೀಜಿ ಮತ್ತು ಮಹಾಸ್ವಾಮೀಜಿ ಭಗೀರಥ ಪೀಠ ಮಧುರೆದ ಪುರುಷೋತ್ತಮಾನಂದ ಪುರಿ ಮಠಾಧೀಶರು ಹೊರಟಿದಿದ್ದಾರೆ.