ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಮಲಲಾನ ಪ್ರಾಣಪ್ರತಿಷ್ಠೆ ಮುಗಿದಿದೆ ಈಗ ರಾಷ್ಟ್ರದ ಪ್ರತಿಷ್ಠೆಯನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಉತ್ತರ
ಉತ್ತರ ಪ್ರದೇಶದ ಬುಲಂದ್ಶಹರ್ನಲ್ಲಿ 19,100 ಕೋಟಿ ರೂ. ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯದ ನಂತರ ಕೆಲವು ದಶಕಗಳವರೆಗೆ ಭಾರತದಲ್ಲಿ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗಿತ್ತು. ದೇಶದ ಹೆಚ್ಚಿನ ಭಾಗವು ಅಭಿವೃದ್ಧಿಯಿಂದ ವಂಚಿತವಾಗಿತ್ತು. ದೇಶದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶವೂ ಅಭಿವೃದ್ಧಿಯಿಂದ ವಂಚಿತವಾಗಿತ್ತು.ಇಲ್ಲಿ ಆಡಳಿತ ನಡೆಸಿದವರು ಬಹುಕಾಲ ಆಡಳಿತಗಾರರಂತೆ ನಡೆದುಕೊಂಡಿದ್ದರಿಂದ ಹೀಗಾಯಿತು ಎಂದು ಮೋದಿ ಹೇಳಿದರು.
ರೈತರ ಕಲ್ಯಾಣವು ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಇಂದು ಸರ್ಕಾರವು ಪ್ರತಿ ರೈತ ಕುಟುಂಬದ ಸುತ್ತಲೂ ಸಂಪೂರ್ಣ ಭದ್ರತೆಯ ಹೊದಿಕೆಯನ್ನು ರಚಿಸುತ್ತಿದೆ. ನಮ್ಮ ಸರ್ಕಾರವು ಕಳೆದ ವರ್ಷಗಳಲ್ಲಿ ಸಾಕಷ್ಟು ಕೆಲಸ ಮಾಡಿದೆ ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಿದೆ, ಇಂದು ವಿಶ್ವದಲ್ಲಿ 3 ಸಾವಿರ ರೂ.ವರೆಗೆ ಸಿಗುವ ಯೂರಿಯಾವನ್ನು ಭಾರತೀಯ ರೈತರಿಗೆ 300 ರೂ.ಗಿಂತಲೂ ಕಡಿಮೆ ಬೆಲೆಗೆ ಲಭ್ಯವಿರುವಂತೆ ಮಾಡಲಾಗಿದೆ ಎಂದರು.