ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ನರೇಶ್ (Naresh) ಹಾಗೂ ಪವಿತ್ರಾ ಲೋಕೇಶ್ರ (Pavitra Lokesh) ಸಂಬಂಧದ ಕುರಿತು ಅನೇಕ ಪ್ರಶ್ನೆಗಳು ಹುಟ್ಟಿಕೊಂಡ ಬಳಿಕ, ಇಬ್ಬರು ಜೊತೆಯಾಗಿ ಮಳ್ಳಿ ಪೆಳ್ಳಿ (ಕನ್ನಡದಲ್ಲಿ ಮತ್ತೆ ಮದುವೆ) ಸಿನಿಮಾವನ್ನು ಮಾಡಿದ್ದೂ, ಮಿಶ್ರ ಪ್ರತಿಕ್ರಿಯೆಯು ವ್ಯಕ್ತವಾಗಿತ್ತು.
ಇದಾದ ಬಳಿಕ ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ನರೇಶ್ರ ಮೂರನೇ ಪತ್ನಿ ರಮ್ಯಾ ರಘುಪತಿ ಎಂಟ್ರಿಕೊಟ್ಟಿದ್ದು, ನೋಟೀಸ್ ಒಂದನ್ನು ಕಳುಹಿಸಿದ್ದಾರೆ.
ನರೇಶ್ ಹಾಗೂ ಪವಿತ್ರಾರ ಮತ್ತೆ ಮದುವೆ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇಂದಿನಿಂದ (ಜೂನ್ 23) ಸ್ಟ್ರೀಂ ಆಗಲಿದೆ. ಆದರೆ ಸಿನಿಮಾ ವಿರುದ್ಧ ರಮ್ಯಾ ರಘುಪತಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಸಿನಿಮಾದ ಒಟಿಟಿ ಸ್ಟ್ರೀಮಿಂಗ್ ಅನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಮಳ್ಳಿ ಪೆಳ್ಳಿ ಸಿನಿಮಾದಲ್ಲಿ ನರೇಶ್ ಹಾಗೂ ಪವಿತ್ರಾ ತಮ್ಮ ವ್ಯಕ್ತಿತ್ವವನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದಿರುವ ರಮ್ಯಾ, ಸಿನಿಮಾದ ಸ್ಟ್ರೀಮಿಂಗ್ ಅನ್ನು ತಡೆ ಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯವು ಅರ್ಜಿಯ ವಿಚಾರಣೆ ಆರಂಭಿಸಿಲ್ಲ.