ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ದಾಳಿಯ ಆರೋಪಿ ತಹವ್ವೊರು ರಾಣಾನನ್ನು ಭಾರತ- ಪಾಕಿಸ್ತಾನ ಗಡಿಯಲ್ಲಿ ಗಲ್ಲಿಗೇರಿಸಬೇಕು ಎಂದು ಮಹಾರಾಷ್ಟ್ರ ಸಚಿವ ಪ್ರತಾಪ್ ಸರ್ ನಾಯರ್ ಶುಕ್ರವಾರ ಒತ್ತಾಯಿಸಿದ್ದಾರೆ.
26/11 ರ ಮುಂಬೈ ದಾಳಿಯ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿ ಸದಾನಂದ್ ಡೇಟ್ ಅವರೇ ತಹವ್ವೂರ್ ರಾಣಾ ಪ್ರಕರಣವನ್ನು ನಿರ್ವಹಿಸುತ್ತಿದ್ದಾರೆ. ಕಸಬ್‌ನನ್ನು ಗಲ್ಲಿಗೇರಿಸಿದಂತೆಯೇ ರಾಣಾನನ್ನೂ ಗಲ್ಲಿಗೇರಿಸಬೇಕು ಎಂಬುದು ಭಾರತದ ಪ್ರತಿಯೊಬ್ಬರೂ ಬಯಸುತ್ತಿದ್ದಾರೆ. ಆತನನ್ನು ಭಾರತ-ಪಾಕಿಸ್ತಾನ ಗಡಿಯಲ್ಲಿ ಗಲ್ಲಿಗೇರಿಸಬೇಕು, ಹೀಗಾಗಿ ಭಾರತದಲ್ಲಿ ಮುಂದೆ ಈ ರೀತಿಯ ಕೃತ್ಯ ಎಸಗಿದರೆ ಆಗುವ ಪರಿಣಾಮಗಳನ್ನು ಪಾಕಿಸ್ತಾನ ಅರ್ಥಮಾಡಿಕೊಳ್ಳುತ್ತದೆ ಎಂದು ಸರ್ ನಾಯಕ್ ತಿಳಿಸಿದ್ದಾರೆ.
ಮುಂಬೈ ತಾಜ್ ಹೋಟೆಲ್ ದಾಳಿಯ ಮಾಸ್ಟರ್ಮೈಂಡ್ ತಹಾವ್ವುರ್ ಹುಸೇನ್ ರಾಣಾನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) 18 ದಿನಗಳ ಕಸ್ಟಡಿಗೆ ತೆಗೆದುಕೊಂಡಿದೆ.