ಮೊದಲ ಬಾರಿಗೆ ಮಗಳ ಮುಖ ತೋರಿಸಿದ ರಣಬೀರ್ ಆಲಿಯಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಆಲಿಯಾ ಭಟ್​ ಮತ್ತು ನಟ ರಣಬೀರ್​ ಕಪೂರ್​ (Ranbir Kapoor) ದಂಪತಿಯು ಮೊದಲ ಬಾರಿಗೆ ಆತಮ್ಮ ಮುದ್ದು ಮಗಳನ್ನು ಜಗತ್ತಿಗೆ ತೋರಿಸಿದ್ದಾರೆ .

ಇದೇ ಮೊದಲ ಬಾರಿಗೆ ರಾಹಾಳನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಾರೆ. ಈ ಮತ್ತು ವಿಡಿಯೋ ವೈರಲ್​ ಆಗಿವೆ. ಸಖತ್​ ಕ್ಯೂಟ್​ ಆಗಿರುವ ರಹಾ (Raha) ಮುಖವನ್ನು ಕಂಡು ಅಭಿಮಾನಿಗಳಿಗೆ ಖುಷಿ ಆಗಿದೆ.

ಬಾಲಿವುಡ್​ ಮಂದಿ ಎಲ್ಲ ಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಈ ವರ್ಷದ ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಮುಂಬೈನ ಜುಹೂನಲ್ಲಿ ಕಪೂರ್​ ಕುಟುಂಬದವರು ಔತಣ ಕೂಟ ಆಯೋಜಿಸಿದ್ದಾರೆ. ಇದರಲ್ಲಿ ಭಾಗಿಯಾದ ರಣಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ಅವರು ಮಗಳನ್ನು ಕೂಡ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಅವರು ಪುತ್ರಿಯ ಮುಖವನ್ನು ತೋರಿಸಿದ್ದಾರೆ.

ಆಲಿಯಾ ಭಟ್​ ಮತ್ತು ರಣಬೀರ್​ ಕಪೂರ್​ ಅವರು ಪರಸ್ಪರ ಪ್ರೀತಿಸಿ, 2022ರ ಏಪ್ರಿಲ್​ 14ರಂದು ಮದುವೆಯಾದರು. ಅದೇ ವರ್ಷ ನವೆಂಬರ್​ 6ರಂದು ಹೆಣ್ಣು ಮಗುವಿಗೆ ಆಲಿಯಾ ಭಟ್​ ಜನ್ಮ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!