ಹೊಸದಿಗಂತ ವರದಿ ಹುಬ್ಬಳ್ಳಿ:
ಬಲಿಷ್ಠ ಕರ್ನಾಟಕಕ್ಕೆ ಜಮ್ಮು ಕಾಶ್ಮೀರ ತಂಡದ ಬೌಲರ್ ಅಕೀಬ್ ನಬಿ ಆರಂಭಿಕ ಆಘಾತ ನೀಡಿದರು. ಕರ್ನಾಟಕ ತನ್ನ ನಾಲ್ಕು ವಿಕೆಟ್ ಕಳೆದುಕೊಂಡು 86 ರನ್ ಗಳಿಸಿದೆ. ಈ ನಡುವೆ ಕರ್ನಾಟಕ ಹಿರಿಯ ಬ್ಯಾಟರ್ ಮಯಂಕ ಅಗರವಾಲ್ (51 ರನ್, 82 ಎಸೆತ, 9 ಬೌಂಡರಿ) ಅರ್ಧಶತಕ ಹೊಡೆಯುವ ಮೂಲಕ ತಮ್ಮ ತಂಡಕ್ಕೆ ಆಸರೆಯಾಗಿದ್ದಾರೆ.
ಶ್ರೇಯಸ್ ಗೋಪಾಲ 31 ಎಸೆತವಾಡಿ 9 ರನ್ ಗಳಿಸಿದ್ದಾರೆ. 17.6 ಓವರ್‌ಗೆ 4 ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತ್ತು. ಮಯಂಕ ಹಾಗೂ ಶ್ರೇಯಸ್ 40 ರನ್ ಜೊತೆಯಾಟ ಮುಂದುವರಿಸಿದ್ದಾರೆ.
ಇದನ್ನೂ ಓದಿ:
ಕೆ.ಎಲ್ ರಾಹುಲ್ (13), ಪಡಿಕಲ್ (11), ಕರುಣ್ ಹಾಗೂ ಸ್ಮರಣ್ ಶೂನ್ಯಕ್ಕೆ ಔಟಾದರು. ಇಡೀ ರಣಜಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಜಮ್ಮು ಕಾಶ್ಮೀರದ ಅಕೀಬ್ ನಬಿ 3 ವಿಕೆಟ್ ಪಡೆದರೆ, ಸುನೀಲ ಕುಮಾರ್ 1 ವಿಕೆಟ್ ಪಡೆದಿದ್ದಾರೆ.



