April 9, 2026
Thursday, April 9, 2026
spot_img

ರಣಜಿ ಟ್ರೋಫಿ ಫೈನಲ್: ಮೊದಲ ದಿನ 284 ರನ್‌ ಪೇರಿಸಿದ ಜಮ್ಮು-ಕಾಶ್ಮೀರ, ಕರ್ನಾಟಕಕ್ಕೆ ಸಂಕಷ್ಟ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಣಜಿ ಟ್ರೋಫಿ ಫೈನಲ್ ನಲ್ಲಿ ಕರ್ನಾಟಕ ವಿರುದ್ಧ ಜಮ್ಮು-ಕಾಶ್ಮೀರ ತಂಡ ಮೊದಲ ದಿನವೇ ಮೇಲುಗೈ ಸಾಧಿಸಿದೆ. ಹುಬ್ಬಳ್ಳಿಯಲ್ಲಿ ನಡೆದ ಪಂದ್ಯದಲ್ಲಿ ದಿನಾಂತ್ಯಕ್ಕೆ ಜಮ್ಮು-ಕಾಶ್ಮೀರ 87 ಓವರ್‌ಗಳಲ್ಲಿ 284 ರನ್ ಗಳಿಸಿ ಬಲಿಷ್ಠ ಸ್ಥಿತಿ ನಿರ್ಮಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಮ್ಮು-ಕಾಶ್ಮೀರ ಪರ ಶುಭಮ್ ಪುಂಡಿರ್ ಅಜೇಯ 117 ರನ್ ಗಳಿಸಿ ತಂಡದ ಹಿನ್ನಡೆಯನ್ನು ತಪ್ಪಿಸಿದರು. ಯಾವರ್ ಹಸನ್ 88 ರನ್ ಸೇರಿಸಿದರೆ, ಅಬ್ದುಲ್ ಸಮಾದ್ 52 ರನ್‌ಗಳೊಂದಿಗೆ ಅಜೇಯರಾಗಿದ್ದರು. ಪ್ರಮುಖ ಜೊತೆಯಾಟಗಳಿಂದ ತಂಡ 280 ರನ್ ಗಡಿ ದಾಟಿತು. ಕರ್ನಾಟಕ ಪರ ಪ್ರಸಿದ್ ಕೃಷ್ಣ ಎರಡು ವಿಕೆಟ್ ಪಡೆದು ಪ್ರತಿರೋಧ ತೋರಿದರು.

ಇದನ್ನೂ ಓದಿ:

ಇನ್ನೊಂದೆಡೆ, ಉತ್ತರ ಕರ್ನಾಟಕದ ಹೆಮ್ಮೆ ಸುನಿಲ್ ಜೋಶಿ ಅವರಿಗೆ ವಿಶೇಷ ಸನ್ಮಾನ ನಡೆಯಿತು. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಹುಬ್ಬಳ್ಳಿಯ ಮೈದಾನದಲ್ಲಿ ಅವರ ಹೆಸರಿನ ಪೆವಿಲಿಯನ್ ಉದ್ಘಾಟಿಸಲಾಯಿತು. ಕಾರ್ಯಕ್ರಮದಲ್ಲಿ ಜೋಶಿ ಭಾವುಕರಾಗಿ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !