ಹೊಸದಿಗಂತ ಡಿಜಿಟಲ್ ಡೆಸ್ಕ್:
ರಣಜಿ ಟ್ರೋಫಿ 2025–26 ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಬಲಿಷ್ಠ ಮುಂಬೈ ವಿರುದ್ಧ ಅದ್ಭುತ ಜಯ ಸಾಧಿಸಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.
ಮುಂಬೈನ ಎಂಸಿಎ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ 326 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ನಾಲ್ಕನೇ ದಿನದಾಟದಲ್ಲೇ 6 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಗುರಿ ತಲುಪಿತು. ಅನುಭವಿ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ 130 ರನ್‌ಗಳ ಅಮೂಲ್ಯ ಶತಕ ಬಾರಿಸಿ ತಂಡದ ಗೆಲುವಿಗೆ ಅಡಿಪಾಯ ಹಾಕಿದರು. ಸ್ಮರಣ್ ಅಜೇಯ 83 ರನ್‌ಗಳೊಂದಿಗೆ ಉತ್ತಮ ಸಾಥ್ ನೀಡಿದರು.
ಇದನ್ನೂ ಓದಿ:
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 120 ರನ್‌ಗಳಿಗೆ ಸೀಮಿತವಾಯಿತು. ಕರ್ನಾಟಕ ಪರ ಬೌಲರ್‌ಗಳು ಶಿಸ್ತಿನ ದಾಳಿಯಿಂದ ಮೆರೆದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ 173 ರನ್ ಗಳಿಸಿ 53 ರನ್ ಮುನ್ನಡೆ ಪಡೆದಿತ್ತು. ಮಯಾಂಕ್ ಅಗರ್ವಾಲ್ 92 ರನ್‌ಗಳೊಂದಿಗೆ ಗಮನಸೆಳೆದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಮುಂಬೈ 377 ರನ್‌ಗಳಿಸಿ 325 ರನ್ ಗುರಿ ನೀಡಿತ್ತು. ಆದರೆ ರಾಹುಲ್ ಮತ್ತು ಸ್ಮರಣ್ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ ಕರ್ನಾಟಕ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿತು.



