ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಒಂದು ಹೇಳಿಕೆಯಿಂದ ಸಿಕ್ಕಾಪಟ್ಟೆ ವಿವಾದ ಸೃಷ್ಟಿಸಿದ್ದ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಸೋಶಿಯಲ್ ಮೀಡಿಯಾಕ್ಕೆ ಮರಳಿದ್ದಾರೆ.
ʼಇಂಡಿಯಾಸ್ ಗಾಟ್ ಟ್ಯಾಲೆಂಟ್ ಶೋʼನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅದಕ್ಕೆ ಆಕ್ಷೇಪಾರ್ಹ ಕಾಮೆಂಟ್‌ಗಳು ಬಂದ ನಂತರ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿದ್ದ ಎಲ್ಲಾ ವೀಡಿಯೊಗಳನ್ನು ಡಿಲೀಟ್ ಮಾಡಿದ್ದರು. ಇನ್ನು ರಣವೀರ್ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು.
ಕಳೆದ ತಿಂಗಳು ತಾನು ಎದುರಿಸಿದ ಸವಾಲುಗಳ ಬಗ್ಗೆ ರಣವೀರ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ. ‘ನನ್ನ ಎಲ್ಲ ಪ್ರೀತಿಪಾತ್ರರಿಗೆ ಧನ್ಯವಾದಗಳು. ಈ ಜಗತ್ತಿಗೆ ಧನ್ಯವಾದ. ನಿಮ್ಮೆಲ್ಲರಿಂದಾಗಿ ನಾನು ಸುಧಾರಿಸಿಕೊಂಡಿದ್ದೇನೆ. ನಾಳೆಯೂ ನಮ್ಮೊಂದಿಗಿರಿ. ಒಂದು ಹೊಸ ಅಧ್ಯಾಯ ಆರಂಭ ಆಗಿದೆ. ಇದು ಮರುಜನ್ಮ’ ಎಂದು ರಣವೀರ್ ಹೇಳಿದ್ದಾರೆ.