ಮಾಧ್ಯಮಗಳ ಕಂಡ್ರೆ ಭಯ..ಅದಕ್ಕೇ ವಿಚಾರಣೆಗೆ ಬರಲಿಲ್ಲ…: ಪೊಲೀಸರಿಗೆ ರಣವೀರ್ ಅಲ್ಹಾಬಾದಿಯಾ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಶ್ಲೀಲ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸ್ ವಿಚಾರಣೆಗೆ ಗೈರು ಹಾಜರಾದ ಖ್ಯಾತ ಇನ್ ಫ್ಲೆಯೆನ್ಸರ್ ರಣವೀರ್ ಅಲ್ಹಾಬಾದಿಯಾ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಮಾಡಿದ ವಿವಾದಾತ್ಮಕ ಹೇಳಿಕೆಗಳ ಕುರಿತು ರಣವೀರ್ ಅಲ್ಹಾಬಾದಿಯಾ ವಿರುದ್ಧ ಸರಣಿ ಎಫ್ ಐಆರ್ ಗಳು ದಾಖಲಾಗಿದ್ದು, ಈ ಸಂಬಂಧ ಮುಂಬೈ ಪೊಲೀಸರು ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ ರಣವೀರ್ ಅಲ್ಲಾಹಬಾಡಿಯಾ ವಿಚಾರಣೆಗೆ ಗೈರಾಗಿದ್ದರು.

ಇಂದು ತಮ್ಮ ಗೈರಿನ ಕುರಿತು ಸ್ಪಷ್ಟನೆ ನೀಡಿರುವ ರಣವೀರ್ ಅಲ್ಹಾಬಾದಿಯಾ ತಮಗೆ ‘ಮಾಧ್ಯಮಗಳ ಕಂಡ್ರೆ ಭಯ.ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿಚಾರಣೆಗೆ ಬರಲಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಪೊಲೀಸರು ಶುಕ್ರವಾರ ಮುಂದಿನ ವಿಚಾರಣೆಗೆ ಸಿದ್ಧತೆ ನಡೆಸಿದ್ದು, ಅಂದು ಹಾಜರಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದೇ ಪ್ರಕರಣದಲ್ಲಿ ಮುಂಬೈ ನಗರ ಪೊಲೀಸರು ಮತ್ತು ಮಹಾರಾಷ್ಟ್ರ ಸೈಬರ್ ಇಲಾಖೆಯು ವಿವಾದಾತ್ಮಕ ರಿಯಾಲಿಟಿ ಶೋ “ಇಂಡಿಯಾಸ್ ಗಾಟ್ ಲ್ಯಾಟೆಂಟ್” ನ ಭಾಗವಾಗಿದ್ದ ಹಾಸ್ಯನಟ ಸಮಯ್ ರೈನಾ ಅವರನ್ನು ಮುಂದಿನ ಐದು ದಿನಗಳಲ್ಲಿ ತಮ್ಮ ಮುಂದೆ ಹಾಜರಾಗುವಂತೆ ಸೂಚಿಸಿದ್ದಾರೆ.

ದೇಶಾದ್ಯಂತ ಹೆಚ್ಚಿನ ಆಕ್ರೋಶಕ್ಕೆ ಕಾರಣವಾಗಿರುವ ಅಲ್ಹಾಬಾದಿಯಾ ಅವರ “ಅಶ್ಲೀಲ ಮತ್ತು ಅಸಭ್ಯ” ಹೇಳಿಕೆಗಳ ಬಗ್ಗೆ ಸೈಬರ್ ಸೆಲ್ ಮತ್ತು ಮುಂಬೈ ಪೊಲೀಸರು ಪ್ರತ್ಯೇಕ ತನಿಖೆ ನಡೆಸುತ್ತಿದ್ದಾರೆ. ಸಮಯ್ ರೈನಾ ಪ್ರಸ್ತುತ ಅಮೆರಿಕದಲ್ಲಿದ್ದಾರೆ ಮತ್ತು ಅಧಿಕಾರಿಗಳ ಮುಂದೆ ಹಾಜರಾಗಲು ಸಮಯ ಕೇಳಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಫೆಬ್ರವರಿ 17 ರ ಮೊದಲು ಅವರ ಹೇಳಿಕೆಯನ್ನು ದಾಖಲಿಸುವಂತೆ ಮುಂಬೈ ಪೊಲೀಸರು ಸೂಚಿಸಿದ್ದಾರೆ, ಆದರೆ ರಾಜ್ಯ ಸೈಬರ್ ಇಲಾಖೆ ಫೆಬ್ರವರಿ 18 ರಂದು ಅವರನ್ನು ಸಮನ್ಸ್ ಮಾಡಿದೆ ಎಂದು ಅವರು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!