ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣ್ ಡಿವೋರ್ಸ್ ಸುದ್ದಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿತ್ತು. ಇದಕ್ಕೆಲ್ಲ ರಣ್‌ವೀರ್ ಇನ್ಸ್ಟಾಗ್ರಾಮ್ ಖಾತೆ ಕಾರಣವಾಗಿತ್ತು.
ಇದ್ದಕ್ಕಿದ್ದಂತೆಯೇ ರಣ್‌ವೀರ್ ತಮ್ಮ ಮದುವೆಯ ಫೋಟೊಗಳನ್ನು ತೆಗೆದು ಹಾಕಿದ ಕಾರಣ ಎಲ್ಲರೂ ಡಿವೋರ್ಸ್ ಎಂದು ಮಾತನಾಡಿದ್ದರು. ಆದರೆ ಇದು ಸುಳ್ಳು ಎನ್ನಲಾಗಿದೆ. ಇದೀಗ ರಣ್‌ವೀರ್ ಜ್ಯುವೆಲ್ಲರಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ನನಗೆ ಜೆವೆಲ್ಸ್ ಅಂದ್ರೆ ತುಂಬಾ ಇಷ್ಟ. ನನ್ನ ಎಂಗೇಜ್‌ಮೆಂಟ್ ರಿಂಗ್ ನನ್ನ ಫೇವರೆಟ್ ಜ್ಯುವೆಲ್ಲರಿ. ಇದನ್ನು ಸದಾ ನನ್ನ ಜೊತೆಯಲ್ಲೇ ಇಟ್ಟುಕೊಳ್ಳುತ್ತೇನೆ. ಮುಂದೆಯೂ ಕೂಡ ಎಂದು ಹೇಳಿ ಪತ್ನಿ ಜೊತೆ ಚೆನ್ನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇನ್ನು ರಣ್‌ವೀರ್ ಪಿಆರ್ ಟೀಂ ಈ ಬಗ್ಗೆ ಮಾತನಾಡಿದ್ದು, ರಣ್‌ವೀರ್ ಫೋಟೊಗಳನ್ನು ಆರ್ಕೈವ್ ಮಾಡಿ ಇಡುತ್ತಿದ್ದಾರೆ. ಅವರ ಮದುವೆಯ ವರ್ಷ ಅಪ್‌ಲೋಡ್ ಆಗಿದ್ದ ಎಲ್ಲ ಫೋಟೊಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಿದೆ.