February 13, 2026
Friday, February 13, 2026
spot_img

ಡಾನ್ 3 ನಿಂದ ಹೊರ ಬಂದ್ರಂತೆ ರಣವೀರ್ ಸಿಂಗ್‌: 40 ಕೋಟಿ ನಷ್ಟ ಪರಿಹಾರ ಕೇಳ್ತಿದ್ದಾರಂತೆ ನಿರ್ದೇಶಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೊಸ ಹವಾ ಸೃಷ್ಟಿಸಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಇತ್ತೀಚೆಗೆ ಒಂದೇ ಸಮಯದಲ್ಲಿ ಯಶಸ್ಸು ಮತ್ತು ವಿವಾದ ಎರಡನ್ನೂ ಮೈಮೇಲೆ ಎಳ್ಕೊಂಡು ಸುದ್ದಿಯಲ್ಲಿದ್ದಾರೆ. ಅವರ ಸ್ಪೈ ಆಕ್ಷನ್ ಸಿನಿಮಾ ಧುರಂಧರ್ ಭಾರೀ ಯಶಸ್ಸು ಕಂಡು, ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ರೂ. ಸಂಗ್ರಹಿಸಿ ನಟನಿಗೆ ಹೊಸ ಸ್ಟಾರ್ ಇಮೇಜ್ ತಂದಿದೆ. ಈ ಚಿತ್ರ ಮುಂದುವರಿದ ಭಾಗವಾದ ಧುರಂಧರ್-2ಗೂ ನಿರೀಕ್ಷೆ ಹೆಚ್ಚಾಗಿದೆ.

ಇದೀಗ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಡಾನ್ 3ನಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದ ರಣವೀರ್, ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇದರಿಂದ ಚಿತ್ರತಂಡಕ್ಕೆ ನಷ್ಟವಾಗಿದ್ದು, ಪರಿಹಾರ ಕೇಳಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಇದನ್ನೂ ಓದಿ:

ಇದರ ನಡುವೆ, ನಟನಿಗೆ ಬೆದರಿಕೆಯ ವಾಯ್ಸ್ ನೋಟ್ ಬಂದಿರುವುದಾಗಿ ವರದಿಯಾಗಿದೆ. ಕೆಲ ಅಪರಿಚಿತರು ಹಣಕ್ಕಾಗಿ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದ್ದು, ಮುನ್ನೆಚ್ಚರಿಕೆಯಾಗಿ ಅವರ ಮನೆಯ ಬಳಿ ಭದ್ರತೆ ಹೆಚ್ಚಿಸಲಾಗಿದೆ. ಈ ಪ್ರಕರಣದ ಮೂಲ ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !