ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರನ್ಯಾರಾವ್ ಚಿನ್ನ ಕಳ್ಳ ಸಾಗಾಣಿಕೆಗೆ ಡಿಜಿಪಿ ಆಗಿರುವ ತಮ್ಮ ಮಲ ತಂದೆಯ ಕಾರನ್ನು ಬಳಸಿರಬಹುದು ಎಂದು ಡಿಆರ್‌ಐ ಅಧಿಕಾರಿಗಳು ತನಿಖೆಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ವಿಮಾನ ನಿಲ್ದಾಣಕ್ಕೆ ಹಲವು ಬಾರಿ ರನ್ಯಾ ಅವರನ್ನು ಅವರ ಮಲ ತಂದೆ, ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಅವರ ಸರ್ಕಾರಿ ಕಾರಿನಲ್ಲಿ ಪಿಕ್ ಅಂಡ್ ಡ್ರಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ತಮ್ಮ ತಂದೆ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಸರ್ಕಾರಿ ವಾಹನದಲ್ಲೇ ಅವರು ಚಿನ್ನ ಸಾಗಿಸಿರುವ ಸಾಧ್ಯತೆಗಳಿವೆ ಎಂಬ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರನ್ಯಾ ಅವರ ಟ್ರಾವೆಲ್ಸ್ ಹಿಸ್ಟರಿ ಪಡೆದು ಡಿಆರ್‌ಐ ಪರಿಶೀಲಿಸಿದೆ. ಈ ಬೆಳವಣಿಗೆಯಿಂದ ಡಿಜಿಪಿಯ ಸರ್ಕಾರಿ ಕಾರು ಚಾಲಕರಿಗೆ ಡಿಆರ್‌ಐ ತನಿಖೆ ಎದುರಾಗುವ ಸಾಧ್ಯತೆಗಳಿವೆ.