ಅತ್ಯಾಚಾರ ಆರೋಪ : ಶಾಸಕ ವಿನಯ್ ಕುಲಕರ್ಣಿ ವಿರುದ್ಧ FIR ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ಶಾಸಕ ವಿನಯ ಕುಲಕರ್ಣಿ ವಿರುದ್ಧ ರೈತ ಮುಖಂಡೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, . ಸಂತ್ರಸ್ತೆ ಮಹಿಳೆ ಇಂದು ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರಿನಲ್ಲಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ಅವರು 2022 ರಿಂದ ನನಗೆ ಪರಿಚಯ. ಆಗಾಗ ವಿಡಿಯೋ ಕಾಲ್ ಮಾಡಿ ಅಸಭ್ಯವಾಗಿ ಬಳಸಿಕೊಳ್ಳುತ್ತಿದ್ದರು. ವಿಡಿಯೋ ಕಾಲ್‌ನಲ್ಲಿ ಸಂಪೂರ್ಣ ಬೆತ್ತಲೆಯಾಗಿ ನನ್ನನ್ನು ನೋಡು ಎನ್ನುತ್ತಿದ್ದರು. 2022ರ ಆಗಸ್ಟ್‌ 24 ರಂದು ಸಂಜೆ 4 ಗಂಟೆಗೆ ಆಟೋದಲ್ಲಿ ಅವರ ಮನೆಗೆ ಹೋಗಿದ್ದೆ.

ಬಳಿಕ ಮನೆಯಿಂದ ಕಾರ್‌ನಲ್ಲಿ ಬಂದ ವಿನಯ್‌ ಕುಲಕರ್ಣಿ ನನಗೆ ಕುಳಿತುಕೊಳ್ಳುವಂತೆ ಹೇಳಿ, ದೇವನಹಳ್ಳಿ ಸಮೀಪದ ಐವಿಸಿ ರೋಡ್‌ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋದರು. ಕತ್ತಲೆ ಆದ ನಂತರ ಹಿಂದಿನ ಸೀಟ್‌ನಲ್ಲಿ ನನ್ನ ಹತ್ತಿರ ಕುಳಿತು ಅಸಭ್ಯ ವರ್ತನೆ ತೋರಿದ್ದಲ್ಲದೆ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಅಕ್ಟೋಬರ್‌ 2 ರಂದು ಗಾಂಧಿ ಜಯಂತಿಯಂದೂ ತಮ್ಮ ಮೇಲೆ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೀಗ ಸಂತ್ರಸ್ತೆ ನೀಡಿದ ದೂರಿನ ಅನ್ವಯ ಸಂಜಯ್ ನಗರ ಪೊಲೀಸ್ ಠಾಣೆಯ ಪೊಲೀಸರು ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ, ಕಿರುಕಿಳ, ಜೀವ ಬೆದರಿಕೆ, , ವಂಚನೆ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!