ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರ ಪ್ರದೇಶದ ಫತೇಪುರ್ ಜಿಲ್ಲೆಯಲ್ಲಿ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೈದ ಆರೋಪಿ ಸೋನು ಅಲಿಯಾಸ್ ಸಿಕಂದರ್ ಎಂಬ ವ್ಯಕ್ತಿಯ ನಿವಾಸ ಮೇಲೆ ಪೊಲೀಸರು ಎರಡನೇ ಧ್ವಂಸ ಕಾರ್ಯಾಚರಣೆ ನಡೆಸಿದ್ದಾರೆ.
ಜೂನ್ 22ರ ಯುವತಿಯ ಮೇಲೆ ಅತ್ಯಾಚಾರ ನಡೆದಿದ್ದು ಎರಡು ದಿನಗಳ ನಂತರ ಸಂತ್ರಸ್ಥೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಳು. ಇನ್ನು ಪ್ರಕರಣ ಸಂಬಂಧ ಸೋನುನನ್ನು ಬಂಧಿಸಲಾಗಿತ್ತು.
ಮೊದಲು ಜೂನ್ 27ರಂದು ಅಧಿಕಾರಿಗಳು ಫತೇಪುರ್ ಜಿಲ್ಲೆಯ ಸೋನು ಅವರ ನಿವಾಸವನ್ನು ಧ್ವಂಸಗೊಳಿಸಿದರು. ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿ ಧ್ವಂಸ ಕಾರ್ಯಾಚರಣೆ ನಡೆಸಲಾಯಿತು.