ದಿಗಂತ ವರದಿ ವಿಜಯನಗರ:
ಜಿಲ್ಲೆಯ ಕೂಡ್ಲಿಗಿ ತಾಲೂಕೀನ ಖಾನಾಹೊಸಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾಗಿ ಕೊಲೆಯಾಗಿರುವ ಪ್ರಕರಣ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಚಿತ್ರದುರ್ಗ ಜಿಲ್ಲೆಯ ಅಬ್ಬೇನಹಳ್ಳಿ ಗ್ರಾಮದ ಕಾಟ್ರಹಳ್ಳಿ ಓಬಣ್ಣ ಅಲಿಯಾಸ್ ಕಾಕಯ್ಯ(30) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಅದೇ ಗ್ರಾಮದ ಮಾನಸಿಕ ಅಸ್ವಸ್ಥೆಯಾಗಿದ್ದ ನೇತ್ರಾವತಿ (30) ಎಂಬ ಮಹಿಳೆಯನ್ನು ತಿಪ್ಪೇಹಳ್ಳಿ ಗ್ರಾಮದ ಜಿನಿಗಿ ಹಳ್ಳದ ಹತ್ತಿರ ಕರೆ ತಂದು ಅತ್ಯಾಚಾರವೆಸಗಿ, ಆಕೆಯ ತಲೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಶಂಕ್ಯೆ ವ್ಯಕ್ತಪಡಿಸಿ ಖಾನಾಹೊಸಹಳ್ಳಿ ಠಾಣೆಯಲ್ಲಿ ಶನಿವಾರ ದೂರು ದಾಖಲಾಗಿತ್ತು.
ಎಸ್ಪಿ ಶ್ರೀಹರಿಬಾಬು ಮಾರ್ಗದರ್ಶನದಲ್ಲಿ ಕೊಟ್ಟೂರು ಸಿಪಿಐ ವೆಂಕಟಸ್ವಾಮಿ, ಹೊಸಹಳ್ಳಿ ಪಿಎಸ್ ಐ ಸಿದ್ರಾಮ ಬಿದರಾಣಿ, ಸಿಬ್ಬಂದಿಗಳಾದ ಕೃಷ್ಣಪ್ಪ, ಕೊಟ್ರೇಶ ಅಂಗಡಿ, ವಿಜಯಕುಮಾರ್, ಮಂಜುನಾಥ , ಅಂಜಿನಮೂರ್ತಿ,
ಕಲ್ಲೇಶ ಪೂಜಾರ, ವಿಜಯಕುಮಾರ್, ಎನ್ ಎಂ ಸ್ವಾಮಿ, ಸಂದೀಪ್, ಸಿದ್ದಲಿಂಗಪ್ಪ, ಕೃಷ್ಣಾ ನಾಯ್ಕ, ಎ ಪಿ ಸಿ ಗೌಡ್ರರವಿಚಂದ್ರ ಅವರ ಕಾರ್ಯವನ್ನು ಪ್ರಶಂಸೆ ಮಾಡಿ ಬಹುಮಾನ ಘೋಷಣೆ ಮಾಡಿದ್ದಾರೆ.