ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬ ಸಾಲ ತೆಗೆದುಕೊಂಡು ವಾಪಾಸ್ ನೀಡದೇ ಸತಾಯಿಸಿದ್ದು, ವ್ಯಕ್ತಿಯ ಪತ್ನಿ ಮೇಲೆ ಸಾಲ ಕೊಟ್ಟ ವ್ಯಕ್ತಿ ಅತ್ಯಾಚಾರ ಎಸಗಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಪತಿಯೆದುರೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ವ್ಯಕ್ತಿ ೪೦ ಸಾವಿರ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಅದನ್ನು ಮರುಪಾವತಿ ಮಾಡಲು ಪಡೆದಿದ್ದ ಗಡುವು ಮುಗಿದಿದ್ದು, ಆದರೂ ಆತ ಸಾಲ ತೀರಿಸುವಲ್ಲಿ ವಿಫಲರಾಗಿದ್ದಾರೆ.
ಇದಕ್ಕಾಗಿಯೇ ಆತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಚಾಕು ತೋರಿಸಿ ಭಯ ಪಡಿಸಿ ಅತ್ಯಾಚಾರ ಎಸಗಿದ್ದಾರೆ. ಜತೆಗೆ ವಿಡಿಯೋ ರೆಕಾರ್ಡ್ ಮಾಡಿ ಆನ್‌ಲೈನ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.