ಅತ್ಯಾಚಾರ, ಎರಡು ಬಾರಿ ಪ್ರೆಗ್ನೆಂಟ್: ಮಡೆನೂರು ಮನು ಮೇಲೆ ಸಂತ್ರಸ್ತೆಯ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರುತೆರೆ ಕಲಾವಿದ ಮನು ಹಾಗೂ ಸಹ ಕಲಾವಿದೆಯ ನಡುವಿನ ಕಿತ್ತಾಟ ಬಟಾ ಬಯಲಾಗಿದೆ. 2018ರಲ್ಲಿ ಪರಿಚಯ ಆದ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿರೋದು ಸದ್ಯದ ಆರೋಪ.

ಇದರ ನಡುವೆ ಅತ್ಯಾಚಾರದಿಂದ ತಾವು ಎರಡು ಬಾರಿ ಪ್ರೆಗ್ನೆಂಟ್ ಆಗಿದ್ದಾಗಿಯೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸರು ಮನು ಮೇಲೆ ಕೇಸ್ ದಾಖಲು ಮಾಡಿಕೊಂಡಿದ್ದಾರೆ.

2018ರಲ್ಲಿ ಮನು ಹಾಗೂ ಯುವತಿ ಮಧ್ಯೆ ಪರಿಚಯ ಬೆಳೆಯಿತು. ಯುವತಿಗೆ ಬಾಡಿಗೆ ಮನೆಯನ್ನು ಮನುವೇ ಹುಡುಕಿಕೊಟ್ಟಿದ್ದ. ‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿದ್ದರು. ಯುವತಿ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ ಮನುಗೆ ಆಗಲೇ ಮದುವೆ ಆಗಿ ಒಂದು ಮಗು ಕೂಡ ಇತ್ತು. ಇಬ್ಬರೂ ಕಾರ್ಯಕ್ರಮ ಒಂದಕ್ಕೆ ತೆರಳಿದ್ದಾಗ ಅತ್ಯಾಚಾರ ನಡೆದಿದೆ ಎಂದು ಯುವತಿ ಆರೋಪಿಸಿದ್ದಾರೆ.

2022ರ ನವೆಂಬರ್ 29ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಮನು ಹಾಗೂ ಯುವತಿ ತೆರಳಿದ್ದರು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ‌ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡೋ ನೆಪದಲ್ಲಿ ಮನು ಯುವತಿಯನ್ನು ರೂಂಗೆ ಕರೆದಿದ್ದರು. ಬಳಿಕ ಯುವತಿ ಮೇಲೆ ಅವರು ಅತ್ಯಾಚಾರ ಮಾಡಿದ್ದಾಗಿ ಎಫ್​​ಐಆರ್​ನಲ್ಲಿ ಉಲ್ಲೇಖ ಆಗಿದೆ.

ಇದರ ಬಳಿಕ ಮನು ಯುವತಿಯನ್ನು ವಿವಾಹ ಕೂಡ ಆಗಿದ್ದರು. ಆ ಬಳಿಕ ಹಲವು ಬಾರಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬುದು ಸಂತ್ರಸ್ತೆಯ ಆರೋಪ ಮಾಡಿದ್ದಾಳೆ .

ಅತ್ಯಾಚಾರದ ಬಳಿಕ ಪ್ರೆಗ್ನೆಂಟ್ ಆಗಿದ್ದೆ . ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಸಂತ್ರಸ್ತೆ ಮತ್ತೊಮ್ಮೆ ಗರ್ಭಿಣಿ ಆಗಿದ್ದರು. ಆ ಬಳಿಕ ಎರಡನೇ ಬಾರಿಯೂ ಮನು ಗರ್ಭಪಾತ ಮಾಡಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!