ಹೊಸದಿಗಂತ ವರದಿ ಅಂಕೋಲಾ:
ಅಂಕೋಲಾ ತಾಲೂಕಿನ ರಾಮನಗುಳಿ ವಲಯ ಅರಣ್ಯ ವ್ಯಾಪ್ತಿಯ ಸುಂಕಸಾಳ ಗ್ರಾಮದ ಮನೆಯೊಂದರ ಬಳಿ ಕಾಣಿಸಿಕೊಂಡ ಅಪರೂಪದ ಬಂಗಾರದ ಬಣ್ಣದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಅವರ್ಸಾದ ಮಹೇಶ ನಾಯ್ಕ ಮತ್ತು ಅವರ ಮಗ ಗಗನ ನಾಯ್ಕ ಹಾಗೂ ಅರಣ್ಯ ಇಲಾಖೆ ಸಹಕಾರದೊಂದಿಗೆ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು.
ಸುಮಾರು 10 ಅಡಿ ಉದ್ದ ಇರುವ ಕಾಳಿಂಗ ಸರ್ಪದ ಬಾಲ ಮಾತ್ರ ಕಪ್ಪು ಬಣ್ಣದಾಗಿದ್ದು ಉಳಿದ ಭಾಗ ಹಳದಿ ಬಂಗಾರದ ಬಣ್ಣದಿಂದ ಕೂಡಿರುವುದು ವಿಶೇಷವಾಗಿದೆ.
ವಲಯ ಅರಣ್ಯಾಧಿಕಾರಿ ಸುರೇಶ ನಾಯ್ಕ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ಹಜರತ್ ಅಲಿ, ಅರಣ್ಯ ರಕ್ಷಕ ನಿಂಗಪ್ಪ ಬಿರಾದಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.