ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ನಲ್ಲಿ ಬೆರೆತು ಹೋಗಿದ್ದಾರೆ, ಆಗಾಗ ಟಾಲಿವುಡ್ ಸಿನಿಮಾಗೆ ಕೈ ಹಾಕಿದ್ರೂ ಸಂಪೂರ್ಣವಾಗಿ ಬಾಲಿವುಡ್ನಲ್ಲಿ ಬ್ಯುಸಿಯಾಗಿದ್ದಾರೆ.
ರಶ್ಮಿಕಾ ಹಾಗೂ ನಿತಿನ್ ಅಭಿನಯದ ಸಿನಿಮಾಕ್ಕೆ ಮಹೂರ್ತ ನೆರವೇರಿತ್ತು. ಆದರೆ ರಶ್ಮಿಕಾ ಬ್ಯುಸಿ ಶೆಡ್ಯೂಲ್ನಿಂದಾಗಿ ಸಿನಿಮಾದಿಂದ ಹೊರಬಂದಿದ್ದಾರೆ. ಈ ಅವಕಾಶ ನೇರವಾಗಿ ಕನ್ನಡದ ನಟಿ ಶ್ರೀಲೀಲಾ ಕೈ ಸೇರಿದೆ.
ಶ್ರೀಲೀಲಾ ಕೂಡ ಸಾಕಷ್ಟು ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಶ್ಮಿಕಾ ಕೈಯಲ್ಲಿ ಎಂಟು ಸಿನಿಮಾಗಳಿದ್ದು, ರಣ್ಬೀರ್ ಜೊತೆಗಿನ ಅನಿಮಲ್ ಸಧ್ಯದಲ್ಲೇ ರಿಲೀಸ್ಗೆ ರೆಡಿ ಇದೆ.