ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮುಟ್ಟಿದ್ದೆಲ್ಲಾ ಚಿನ್ನ ಅನ್ನೋ ಕಾಲ ಬಂದಿದೆ, ರಶ್ಮಿಕಾ ಯಾವ ಸಿನಿಮಾದಲ್ಲಿ ನಟಿಸಿದ್ರೂ ಅದು ಸೂಪರ್ ಹಿಟ್ ಆಗುತ್ತಿದೆ.
ರಶ್ಮಿಕಾ ಈವರೆಗೂ 18 ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಲ್ಲದರಲ್ಲೂ ಅವರದ್ದು ಗ್ಲಾಮರಸ್ ಪಾತ್ರವಾಗಿದೆ. ಡಿಯರ್ ಕಾಮ್ರೆಡ್ ಹಾಗೂ ಗುಡ್‌ಬೈ ಸಿನಿಮಾದಲ್ಲಿ ಅವರ ಕ್ಯಾರೆಕ್ಟರ್‌ಗೆ ಹೆಚ್ಚು ಒತ್ತು ಕೊಟ್ಟಿದ್ರೂ ರಶ್ಮಿಕಾ ಮುಖ್ಯ ಪಾತ್ರಧಾರಿ ಆಗಿರಲಿಲ್ಲ.
ಇದೀಗ ರಶ್ಮಿಕಾ ಹೀರೋಯಿನ್ ಓರಿಯೆಂಟೆಡ್ ಸಿನಿಮಾವೊಂದರಲ್ಲಿ ನಟಿಸಲಿದ್ದಾರಂತೆ. ಮಹಿಳಾ ಪ್ರಧಾನ ಸಿನಿಮಾದಲ್ಲಿ ಕತೆಯೇ ಹೀರೋ ಆಗಬೇಕು ಅನ್ನೋದು ಬಹುತೇಕ ನಟಿಯರ ಆಸೆ. ರಶ್ಮಿಕಾಗೆ ಈ ರೀತಿ ಚಾಲೆಂಜಿಂಗ್ ರೋಲ್ ದೊರೆತಿದ್ದು, ರಶ್ಮಿಕಾ ಒಕೆ ಮಾಡಿದ್ದಾರೆ.