ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ 2’ಸಿನಿಮಾದ ಗೆಲುವು ಬಾಲಿವುಡ್‌ಗೆ ಮರುಜೀವ ಸಿಕ್ಕಂತೆ ಆಗಿದೆ. ‘ಸ್ತ್ರೀ 1’ ಮತ್ತು ‘ಸ್ತ್ರೀ 2’ರ ಸಕ್ಸಸ್ ನಂತರ ಪಾರ್ಟ್ 3 ಬರುವ ಬಗ್ಗೆ ಕೂಡ ಅಧಿಕೃತ ಘೋಷಣೆಯಾಗಿದೆ.
ಆದರೆ ಮುಂಬರುವ ಸೀಕ್ವೆಲ್‌ನಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಲಿದ್ದು, ಅಕ್ಷಯ್ ಕುಮಾರ್ ವಿಲನ್ ಆಗಿ ಅಬ್ಬರಿಸಲಿದ್ದಾರೆ.
ಸ್ತ್ರೀ 2’ ಸಿನಿಮಾಗಿಂತ ಪಾರ್ಟ್ 3 ಇನ್ನೂ ದೊಡ್ಡ ಮಟ್ಟದಲ್ಲಿ ಮೂಡಿ ಬರಲಿದೆ. ಮುಂದುವರೆದ ಸೀಕ್ವೆಲ್‌ನಲ್ಲಿ ರಶ್ಮಿಕಾ ಜೊತೆ ತಮನ್ನಾ ಭಾಟಿಯಾ , ಆಯುಷ್ಮಾನ್ ಖುರಾನಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.