ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ನಮ್ಮ ಭಾರತೀಯ ಸಿನಿಮಾಗಳು ಮತ್ತು ನಮ್ಮ ನಟರು ಜಗತ್ತಿನಾದ್ಯಂತ ಮನ್ನಣೆ ಪಡೆಯುತ್ತಿದ್ದು, ವಿಶ್ವದ ಅನೇಕ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. ಆಸ್ಕರ್‌ನಲ್ಲೂ ಭಾರತೀಯ ಸಿನಿಮಾ ಹೆಸರು ಮಾಡಿದ್ದು, ಇದೀಗ ನೆದರ್‌ಲ್ಯಾಂಡ್‌ನ ಸೆಪ್ಟಿಮಿಸ್ ಪ್ರಶಸ್ತಿಗಳ ನಾಮನಿರ್ದೇಶನಗಳಲ್ಲಿ ಸಹ ನಮ್ಮ ನಟ-ನಟಿಯರು ಸ್ಥಾನ ಪಡೆದಿದ್ದಾರೆ.
ಈ ಬಾರಿ ಭಾರತದ ರಶ್ಮಿಕಾ ಮಂದಣ್ಣ ಜೊತೆಗೆ ಬಾಲಿವುಡ್ ನಟಿ ನಮಿತಾ ಲಾಲ್ ಕೂಡ ಏಷ್ಯನ್ ಅತ್ಯುತ್ತಮ ನಟಿ ನಾಮನಿರ್ದೇಶನದಲ್ಲಿ ನಿಂತಿದ್ದಾರೆ. ಮಲಯಾಳಂ ಹೀರೋ ಟೋವಿನೋ ಥಾಮಸ್ ಅತ್ಯುತ್ತಮ ಏಷ್ಯನ್ ನಟ ನಾಮನಿರ್ದೇಶನ ಪಡೆದರು. ಬಾಲಿವುಡ್ ಹಾಸ್ಯನಟ ಭುವನ್ ಭಾಮ್ ಕೂಡ ಉಪಸ್ಥಿತರಿದ್ದರು.
ಇದರಿಂದ ರಶ್ಮಿಕಾ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಆ ಪ್ರಶಸ್ತಿಯನ್ನು ರಶ್ಮಿಕಾ ಗೆಲ್ಲಬೇಕೆಂದು ಹರಸುತ್ತಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಸೆ.26ರಂದು ನಡೆಯಲಿದೆ.
What a lovely surprise this is. 😄🤍 thankyou.. this is all because of you my loves. 🤍 eternally grateful 🤍 https://t.co/RjJRn8acVW
— Rashmika Mandanna (@iamRashmika) September 5, 2023