ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಯಾಂಡಲ್‌ವುಡ್‌ನಲ್ಲಿ ಕಾಲಿಟ್ಟಾಗಿನಿಂದಲೂ ಸುದೀರ್ಘ ಯಶಸ್ಸಿನ ಹಾದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಈಗ ತಮ್ಮದೇ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಯಿಂದ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಕೆಲ ಸಮಯಗಳಿಂದ ವಿವಾದದಿಂದ ದೂರವಿದ್ದ ರಶ್ಮಿಕಾ, ಇತ್ತೀಚೆಗಷ್ಟೇ ನೀಡಿದ ಒಂದು ಸಂದರ್ಶನದಲ್ಲಿ ಮಾತನಾಡಿದ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ.
ಇತ್ತೀಚಿನ ಸಂದರ್ಶನವೊಂದರಲ್ಲಿ “ನಿಮಗೆ ಗೊತ್ತಾ, ಕೂರ್ಗ್ ಸಮುದಾಯದಲ್ಲಿ, ಯಾರೂ ಇದುವರೆಗೆ ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿಲ್ಲ. ನಮ್ಮ ಇಡೀ ಸಮುದಾಯದಲ್ಲಿ ಉದ್ಯಮಕ್ಕೆ ಪ್ರವೇಶಿಸಿದ ಮೊದಲ ವ್ಯಕ್ತಿ ನಾನೇ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದರು. ಈ ಹೇಳಿಕೆ ಇದೀಗ ಎಲ್ಲೆಡೆ ವೈರಲ್ ಆಗುತ್ತಿವೆ. ನಟಿ ತಮ್ಮದೇ ಸಮುದಾಯದ ಇತಿಹಾಸದ ಬಗ್ಗೆ ಸಮರ್ಪಕವಾಗಿ ತಿಳಿದಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ.
ಪ್ರಖ್ಯಾತ ನಟಿ ಪ್ರೇಮ ಸೇರಿ, ನಿಧಿ ಸುಬ್ಬಯ್ಯ, ಹರ್ಷಿಕಾ ಪೂಣಚ್ಚ ಹಾಗೂ ಶುಭ್ರ ಅಯ್ಯಪ್ಪ ಸೇರಿದಂತೆ ಹಲವು ಕೊಡವ ವ್ಯಕ್ತಿತ್ವಗಳು ಹಿಂದಿನಿಂದಲೂ ಕನ್ನಡ, ತಮಿಳು, ತೆಲುಗು ಮತ್ತು ಬೋಜ್ ಪುರಿ ಚಿತ್ರರಂಗದಲ್ಲಿ ಯಶಸ್ವಿಯಾಗಿ ಬಣ್ಣಹಚ್ಚಿದ್ದಾರೆ. ಈ ಎಲ್ಲ ಹೆಸರುಗಳು ಮರೆತು ಹೋಯ್ತಾ ? “ಇವರು ಎಲ್ಲರು ಕೊಡವರು ಅಲ್ಲವೇ?” ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಈ ಹಿಂದೆಯೂ ಕೆಲವೊಮ್ಮೆ ಮಾತನಾಡುವ ವೇಳೆ ಎಡವಟ್ಟಿಗೆ ಒಳಗಾಗಿದ್ದ ರಶ್ಮಿಕಾ, ಇದೀಗ ತಮ್ಮದೇ ಸಮುದಾಯದ ಕುರಿತು ಹೇಳಿದ ಮಾತುಗಳಿಂದಾಗಿ ತಮ್ಮ ಅಭಿಮಾನಿಗಳಲ್ಲೂ ನಿರಾಸೆ ಮೂಡಿಸಿದ್ದಾರೆ. ಸದ್ಯ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧಕ್ಕೆ ಗುರಿಯಾಗಿದೆ. ರಶ್ಮಿಕಾ ಇದಕ್ಕೆ ಸ್ಪಷ್ಟನೆ ನೀಡುತ್ತಾರೆವೋ ಇಲ್ಲವೋ ಎಂಬುದನ್ನು ಕಾಡು ನೋಡಬೇಕಷ್ಟೇ.
View this post on Instagram