CINE | ಈ ಡೈರೆಕ್ಟರ್‌ ಚಾನ್ಸ್‌ ಕೊಟ್ರೆ ಆಕ್ಟ್‌ ಮಾಡೋಕೆ ಖುಷಿ ಎಂದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಕಾಲ್‌ಶೀಟ್‌ಗಾಗಿ ಸಾಕಷ್ಟು ನಿರ್ದೇಶಕರು ಹಾಗೂ ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ಈ ಡೈರೆಕ್ಟರ್‌ ಜೊತೆ ಕೆಲಸ ಮಾಡೋ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ವಿಜಯ್ ದೇವರಕೊಂಡ ಸಹೋದರ ಆನಂದ್ ದೇವರಕೊಂಡ ನಟನೆಯ ಸಿನಿಮಾ ಗಂ ಗಂ ಗಣೇಶಾ ಈವೆಂಟ್​ಗೆ ಅತಿಥಿಯಾಗಿ ತೆರಳಿದ್ದರು. ಈ ವೇಳೆ ರಶ್ಮಿಕಾ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅವರು ‘ಬೇಬಿ’ ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ನಿರ್ದೇಶಕ ಸಾಯಿ ರಾಜೇಶ್ ನೀಲಂ ಜೊತೆ ಸಿನಿಮಾ ಮಾಡೋ ಬಯಕೆ ವ್ಯಕ್ತಪಡಿಸಿದ್ದಾರೆ.

ನಾನು ಬೇಬಿ ಸಿನಿಮಾ ನೋಡಿ ಕಣ್ಣೀರು ಹಾಕಿದೆ. ಅವರ ಜೊತೆ ಕೆಲಸ ಮಾಡಬೇಕು ಎನ್ನುವ ಬಯಕೆ ಇದೆ. ಸಾಯಿ ರಾಜೇಶ್ ನಿರ್ದೇಶನ ನಿಜಕ್ಕೂ ಮೆಚ್ಚಿಕೊಳ್ಳುವಂಥದ್ದು. ಅವರ ನಿರ್ದೇಶನದಲ್ಲಿ ಒಂದು ಸಂಕೀರ್ಣ ಪಾತ್ರವನ್ನು ಮಾಡುವ ಬಯಕೆ ನನ್ನದು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!