ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಅಭಿನಯದ ಛಾವ ಸಿನಿಮಾ ಟ್ರೇಲರ್ ನಿನ್ನೆಯಷ್ಟೇ ರಿಲೀಸ್ ಆಗಿದೆ. ವಿಕ್ಕಿ ಕೌಶಲ್ ಜೊತೆ ನಟಿ ಅಭಿನಯಿಸುತ್ತಿದ್ದು, ಮರಾಠಿ ರಾಣಿಯ ಪಾತ್ರದಲ್ಲಿ ರಶ್ಮಿಕಾ ಕಾಣಿಸಿದ್ದಾರೆ.
ಈ ಬಗ್ಗೆ ರಶ್ಮಿಕಾಗೆ ಪ್ರಶ್ನೆ ಎದುರಾಗಿದ್ದು, ಒಬ್ಬ ಸೌತ್ ಇಂಡಿಯನ್ ಆಕ್ಟರ್ ಆಗಿದ್ದು, ಮರಾಠಿ ರಾಣಿಯ ಪಾತ್ರದಲ್ಲಿ ಅಭಿನಯ ಮಾಡಿದ್ದೀರಿ ಇದರ ಬಗ್ಗೆ ಹೇಳಿ ಎಂದಿದ್ದಾರೆ.
ಈ ವೇಳೆ ರಶ್ಮಿಕಾ, ಯಾವುದೇ ನಟಿಗೆ ವಿಭಿನ್ನ ಪಾತ್ರಗಳು ಎಂದರೆ ಇಷ್ಟಇರುತ್ತದೆ. ಒಬ್ಬ ಸೌತ್ ನಟಿಗೆ ಮಹಾರಾಷ್ಟ್ರದ ರಾಣಿಯ ಪಾತ್ರ ಅಂದರೆ ಏನರ್ಥ? ನಾನು ಜೀವನದಲ್ಲಿ ಬಯಸಿದ್ದರೂ ಇಷ್ಟೊಂದು ವಿಭಿನ್ನ ಪಾತ್ರ ಮಾಡೋಕೆ ಸಾಧ್ಯವಿರಲಿಲ್ಲ. ಸಿಕ್ಕಾಪಟ್ಟೆ ತೃಪ್ತಿಕೊಟ್ಟ ಪಾತ್ರ ಇದು. ಇದರ ನಂತರ ನಾನು ರಿಟೈರ್ ಆದರೂ ಬೇಜಾರಿಲ್ಲ ಎಂದು ನಗುತ್ತಾ ಹೇಳಿದ್ದಾರೆ.