August 4, 2026
Tuesday, August 4, 2026
spot_img

ದೇಹವನ್ನು ದೇಹದ ರೀತಿ ಟ್ರೀಟ್‌ ಮಾಡೋದನ್ನು ಕಲಿಬೇಕು ಎಂದ ರಶ್ಮಿಕಾ ಮಂದಣ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾ ಮೈಸಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾಗಾಗಿ ರಶ್ಮಿಕಾ ಸಾಕಷ್ಟು ಕಷ್ಟಪಡುತ್ತಿದ್ದು, ಸ್ಟಂಟ್‌ ಮಾಡುವ ವೇಳೆ ಹಿಪ್‌ ಇಂಜುರಿ ಮಾಡಿಕೊಂಡಿದ್ದಾರೆ.

ರಶ್ಮಿಕಾಗೆ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿದ್ದಂತೆಯೇ ಸ್ಪಷ್ಟನೆ ನೀಡೋದಕ್ಕಾಗಿ ನಟಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಪೋಸ್ಟ್‌ನಲ್ಲೇನಿದೆ?

ಎಲ್ಲರಿಗೂ ಹಾಯ್‌, ಇಂಜುರಿಗಳು ತುಂಬಾನೇ ಕಷ್ಟ! ನನ್ನ ಇಂಜುರಿ ಬಗ್ಗೆ ಯಾರಿಗೂ ಗೊತ್ತಾಗೋದು ಬೇಡ ಎಂದುಕೊಂಡಿದ್ದೆ, ಆದರೆ ಎಲ್ಲರಿಗೂ ಗೊತ್ತಾಗಿದ್ದಾಗಿದೆ. ಹಿಪ್‌ ಇಂಜುರಿ ಈಗ ಆಗಿದ್ದಲ್ಲ, ನಾನೀಗಾಗಲೇ ರಿಕವರಿ ಸ್ಟೇಜ್‌ನಲ್ಲಿದ್ದೀನಿ. ಇದು ನನ್ನ ಮೂರನೇ ಬ್ಯಾಕ್‌ ಇಂಜುರಿ. ನನ್ನ ದೇಹವನ್ನು ದೇಹದ ರೀತಿಯಲ್ಲಿ ನೋಡೋದನ್ನು ಕಲಿಬೇಕು, ಮಶೀನ್‌ ರೀತಿ ಟ್ರೀಟ್‌ ಮಾಡೋದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಮೈಸಾಗಾಗಿ ಡ್ಯಾನ್ಸ್‌ ಶೂಟ್‌ ಮಾಡುವ ವೇಳೆ ಈ ರೀತಿ ಆಯ್ತು. ಇಷ್ಟೆಲ್ಲಾ ಅಗ್ರೆಸ್ಸಿವ್‌ ಆಗಿ ಈ ಹಿಂದೆ ನಾನೇನು ಮಾಡಿಯೇ ಇಲ್ಲ. ನನಗೆ ನೋವಾಗ್ತಾ ಇಲ್ಲ ಅಂತ ಸುಳ್ಳು ಹೇಳೋದಿಲ್ಲ. ಸಿಕ್ಕಾಪಟ್ಟೆ ನೋವಿದೆ ಆದರೆ ತಡೆಯೋಕೇ ಆಗೋದಿಲ್ಲ ಅನ್ನೋ ಅಷ್ಟಲ್ಲ. ಈ ನೆಪದಿಂದ ನನಗೆ ಬ್ರೇಕ್‌ ಸಿಕ್ಕಿದೆ. ನಿಮ್ಮನ್ನೆಲ್ಲಾ ಮಾತನಾಡಿಸೋಕೆ ಅವಕಾಶ ಸಿಕ್ಕಿದೆ.

ಮನೆಯಲ್ಲೇ ಇದ್ದೀನಿ ಪಝಲ್‌ ಸಾಲ್ವ್‌ ಮಾಡಿಕೊಂಡು ಎಂಜಾಯ್‌ ಮಾಡ್ತಿದ್ದೇನೆ. ಈಗ ಫಿಸಿಕಲ್‌ ಆಕ್ಟಿವಿಟಿಗೆ ಸಮಯವೇ ಇಲ್ಲ, ಮಾಡುವಂತೆಯೂ ಇಲ್ಲ. ಮನೆಯಲ್ಲೇ ಕೂತು ದಪ್ಪ ಆಗಬಾರದು ಅಂತ ತುಂಬಾ ಟ್ರೈ ಮಾಡ್ತಿದ್ದೇನೆ. ಆದರೆ ಈ ಡೆಸರ್ಟ್ಸ್‌ ನನ್ನನ್ನು ಬಿಡ್ತಾ ಇಲ್ಲ. ಇದನ್ನು ತಿಂದು ತಿಂದು ಏನಾಗ್ತಿನೋ ಗೊತ್ತಿಲ್ಲ. ಸದ್ಯಕ್ಕೆ ಇಷ್ಟೆ, ಯಾರೂ ತಲೆ ಕೆಡಿಸಿಕೊಳ್ಳಬೇಡಿ. ನಾನು ಆರಾಮಾಗಿದ್ದೀನಿ ನನ್ನ ಬಗ್ಗೆ ಚಿಂತೆ ಬೇಡ. ನಿಮ್ಮನ್ನೆಲ್ಲಾ ತುಂಬಾ ಪ್ರೀತಿಸ್ತೇನೆ ಎಂದು ಪೋಸ್ಟ್‌ ಮಾಡಿದ್ದಾರೆ.

ಇದರ ಜೊತೆ ಮನೆಯಲ್ಲಿರುವಾಗ ತಾವು ಏನೆಲ್ಲಾ ಮಾಡ್ತಿದ್ದೀವಿ ಅನ್ನೋ ಫೋಟೊಗಳನ್ನು ಪೋಸ್ಟ್‌ ಮಾಡಿದ್ದಾರೆ. ರಶ್ಮಿಕಾರ ಈ ಪೋಸ್ಟ್‌ಗೆ 1.2 ಮಿಲಿಯನ್‌ ಲೈಕ್ಸ್‌ ಬಂದಿದೆ.

ರವೀಂದ್ರ ಪುಲ್ಲೆ ನಿರ್ದೇಶನದ ಗೊಂಡ್‌ ಬುಡಕಟ್ಟು ಜನಾಂಗದ ಹಿನ್ನೆಲೆಯ ಭಾವನಾತ್ಮಕ ಆಕ್ಷನ್‌ ಥ್ರಿಲ್ಲರ್‌ ಮೈಸಾಗಾಗಿ ರಶ್ಮಿಕಾ ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಇದರಲ್ಲಿರುವ ಆಕ್ಷನ್‌ ಸೀಕ್ವೆನ್ಸ್‌ಗಳನ್ನು ರಶ್ಮಿಕಾ ಖುದ್ದು ಮಾಡಿದ್ದಾರೆ. ರಣಬಾಲಿ, ಅನಿಮಲ್‌ ಪಾರ್ಕ್‌, ರಾಕಾ, ಪುಷ್ಪ ೩ ಸದ್ಯ ರಶ್ಮಿಕಾ ಕೈಯಲ್ಲಿರುವ ಸಿನಿಮಾಗಳಾಗಿವೆ.

https://www.instagram.com/p/DblEDJIiQ3l/?utm_source=ig_embed&ig_rid=ASbV257AHCLbTLBsD7cqmLQ&img_index=9

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !