ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಇದೀಗ ಸೌತ್‌ನಲ್ಲಿ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಬಾಲಿವುಡ್‌ನಲ್ಲೂ ರಶ್ಮಿಕಾ ಹಂಗಾಮ ಜೋರಾಗಿದೆ.
ಹೀಗಿರುವಾಗ ಇದೀಗ ನಟಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟು 8 ವರ್ಷಗಳು ಕಳೆದಿವೆ. ಇದೇ ಖುಷಿಯಲ್ಲಿ ಅಭಿಮಾನಿಗಳಿಗೆ ವಿಶೇಷ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
ನಟಿಯ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಸಮುದ್ರ ಕಿನಾರೆಯ ಸುಂದರ ಫೋಟೋ ಶೇರ್ ಮಾಡಿ, ಚಿತ್ರರಂಗಕ್ಕೆ ಕಾಲಿಟ್ಟು 8 ವರ್ಷಗಳು ಪೂರೈಸಿವೆ ಮತ್ತು ನಾನು ಇಲ್ಲಿಯವರೆಗೆ ಏನನ್ನು ಮಾಡಿದ್ದೇನೋ ಅದನ್ನು ಮಾಡಲು ಏಕೈಕ ಕಾರಣವೆಂದರೆ ಅದು ನಿಮ್ಮ ಪ್ರೀತಿ ಮತ್ತು ಬೆಂಬಲ. ಧನ್ಯವಾದಗಳು ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ