ರಶ್ಮಿಕಾ ವಿಡಿಯೋ ವೈರಲ್ : ಹೆಚ್ಚಾಗ್ತಿದೆ ‘ಡೀಪ್‌ಫೇಕ್’ ವಿಡಿಯೋ, ಕ್ರಮಕ್ಕೆ ನೆಟ್ಟಿಗರ ಆಗ್ರಹ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಡೀಫ್‌ಫೇಕ್ ವಿಡಿಯೋಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ನಟಿ ರಶ್ಮಿಕಾ ಮಂದಣ್ಣ ವಿಡಿಯೋವೊಂದು ವೈರಲ್ ಆಗಿದ್ದು,ಬಟ್ಟೆಯ ಬಗ್ಗೆ ಕೆಟ್ಟ ರೀತಿಯ ಕಮೆಂಟ್‌ಗಳು ಬಂದಿದ್ದವು. ಅಸಲಿಗೆ ಅದು ರಶ್ಮಿಕಾ ಅಲ್ಲ, ಮತ್ಯಾರದ್ದೋ ದೇಹಕ್ಕೆ ರಶ್ಮಿಕಾ ಮುಖವನ್ನು ಅಟ್ಯಾಚ್ ಮಾಡಿ ವಿಡಿಯೋ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಫೇಕ್ ವಿಡಿಯೋಗಳು ನಿಜಕ್ಕೆ ತೀರಾ ಸಮೀಪವಿದ್ದು, ಕೆಲವರಿಗೆ ಇದು ಫೇಕ್ ಎಂದು ತಿಳಿಯಲೂ ಆಗುವುದಿಲ್ಲ ಹಾಗಾಗಿ ಕ್ರಮಕ್ಕೆ ಮುಂದಾಗಬೇಕು. ಇದರಿಂದ ಸಾಕಷ್ಟು ಮುಗ್ಧರಿಗೆ ಸಮಸ್ಯೆಯಾಗಲಿದೆ ಎಂದು ನೆಟ್ಟಿಗರು ದೂರಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!