ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದೇ ಹೇಳಿಕೊಳ್ಳುವ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸದ್ದಿಲ್ಲದೇ ನಿಶ್ಚಿತಾರ್ಥಕ್ಕೆ ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಫೆಬ್ರವರಿ ಎರಡನೇ ವಾರದಲ್ಲಿ ಜೋಡಿ ಕುಟುಂಬ ಹಾಗೂ ಸ್ನೇಹಿತರ ಎದುರು ಎಂಗೇಜ್‌ಮೆಂಟ್ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಈ ಹಿಂದೆ ಗೀತಾ ಗೋವಿಂದಂ, ಡಿಯರ್ ಕಾಮ್ರೆಡ್‌ನಲ್ಲಿ ಇಬ್ಬರೂ ಒಟ್ಟಿಗೇ ನಟಿಸಿದ್ದರು. ಇಲ್ಲಿಂದಲೇ ಇಬ್ಬರ ಸ್ನೇಹ ಆರಂಭವಾಗಿದೆ ಎನ್ನಲಾಗಿದೆ.
ಎಂಗೇಜ್‌ಮೆಂಟ್ ಬಗ್ಗೆ ಈವರೆಗೂ ಇಬ್ಬರೂ ಅಧಿಕೃತ ಮಾಹಿತಿ ನೀಡಿಲ್ಲ. ಈ ಸುದ್ದಿ ವೈರಲ್ ಆಗುತ್ತಿದ್ದರೂ ಫ್ಯಾನ್ಸ್ ಆಶ್ಚರ್ಯಪಟ್ಟಿಲ್ಲ. ಡೇಟಿಂಗ್‌ನಲ್ಲಿ ಇರುವುದು ಸಾಕಷ್ಟು ಬಾರಿ ಪ್ರೂವ್ ಆಗಿದೆ ಹೀಗಾಗಿ ಆಶ್ಚರ್ಯ ಇಲ್ಲ, ಖುಷಿ ಅಷ್ಟೆ ಅಂತಿದ್ದಾರೆ ಫ್ಯಾನ್ಸ್