CINE | ಅಮೆರಿಕದ ಮ್ಯಾನ್‌ಹ್ಯಾಟನ್‌ ರಸ್ತೆಯಲ್ಲಿ ಕೈ ಹಿಡಿದು ನಡೆದಾಡಿದ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಈ ಮೊದಲು ಒಟ್ಟಾಗಿ ಅನೇಕ ಬಾರಿ ವಿದೇಶ ಪ್ರಯಾಣ ಮಾಡಿ ಬಂದ ಉದಾಹರಣೆ ಇದೆ. ಆದರೆ, ವಿಶೇಷ ಎಂದರೆ ಯಾವಾಗಲೂ ಅವರು ಈ ವಿಚಾರವನ್ನು ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ವಿದೇಶದಲ್ಲಿ ಇವರು ಒಟ್ಟಾಗಿ ಕಾಣಿಸಿಕೊಂಡಿರೋ ಫೋಟೋ ವೈರಲ್ ಆಗಿಲ್ಲ. ಈಗ ವಿಜಯ್ ಹಾಗೂ ರಶ್ಮಿಕಾ ಅವರು ಅಮೆರಿಕದ ನ್ಯೂಯಾರ್ಕ್​ನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಮ್ಯಾನ್​ಹಾಟನ್ ರಸ್ತೆಗಳಲ್ಲಿ ವಿಜಯ್ ಹಾಗೂ ರಶ್ಮಿಕಾ ಒಟ್ಟಾಗಿ ನಡೆದಿದ್ದಾರೆ. ಈ ವೇಳೆ ಅವರು ಕೈ ಕೈ ಹಿಡಿದುಕೊಂಡಿದ್ದರು. ಹಾಗಾದರೆ, ಇವರು ವಿದೇಶದಲ್ಲಿ ಕಾಣಿಸಿಕೊಂಡಿದ್ದು ಏಕೆ? ಅದಕ್ಕೂ ಉತ್ತರ ಇದೆ. ನ್ಯೂಯಾರ್ಕ್​​ನಲ್ಲಿ ನಡೆದ 43ನೇ ಇಂಡಿಯನ್ ಡೇ ಪರೇಡ್​ಗೆ ಇಬ್ಬರೂ ಮುಖ್ಯ ಅತಿಥಿ ಆಗಿದ್ದರು. ಅಲ್ಲಿರುವ ಭಾರತೀಯರು ಇವರನ್ನು ಅತಿಥಿಯಾಗಿ ಕರೆಸಿದ್ದರು.  ಈ ಫೋಟೋಗಳು ವೈರಲ್ ಆಗಿವೆ.

ರಶ್ಮಿಕಾ ಹಾಗೂ ವಿಜಯ್ ಜೋಡಿಯನ್ನು ಅನೇಕರು ಕೊಂಡಾಡಿದ್ದಾರೆ. ‘ವಿರಶ್’ ಈಸ್ ಬ್ಯಾಕ್ ಎಂದು ಕೆಲವರು ಹೇಳಿದ್ದಾರೆ. ವಿರಶ್ ಎಂದರೆ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪದವನ್ನು ಶಾರ್ಟ್ ಆಗಿ ಹೇಳಿರುವುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!