ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಕರೆಯೋಲೆ ಫೋಟೊ ವೈರಲ್ ಆಗಿತ್ತು. ಇದೀಗ ಇನ್ವಿಟೇಷನ್‌ನಲ್ಲಿ ಏನಿದೆ ಎನ್ನುವ ವಿಡಿಯೋ ವೈರಲ್ ಆಗಿದೆ. ಇದೇ ತಿಂಗಳು 26 ರಂದು ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ.
ಇನ್ವಿಟೇಷನ್‌ನಲ್ಲಿ ಏನಿದೆ?
ಆಮಂತ್ರಣ ಪತ್ರಿಕೆ
ನ್ಯಾಷನಲ್ ಕ್ರಶ್ ಪರ್ಫ್ಯೂಮ್
ಹ್ಯಾಂಡ್ ಲೋಷನ್
ಫೂಟ್ ಕ್ರೀಮ್
ರೌಡಿ ಬ್ರಾಂಡ್‌ನ ಟೀ ಶರ್ಟ್
ಡ್ರೈ ಫ್ರೂಟ್ಸ್
ಮದುವೆ ಫೆಬ್ರವರಿ 26 ಕ್ಕೆ ನಡೆಯಲಿದ್ದು, ಮದುವೆ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಅತ್ಯಾಪ್ತ ಸ್ನೇಹಿತರಷ್ಟೆ ಭಾಗಿ ಆಗಲಿದ್ದಾರೆ. ಬಳಿಕ ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಮತ್ತು ಬಾಲಿವುಡ್ನ ಸೆಲೆಬ್ರಿಟಿಗಳು ಭಾಗಿ ಆಗಲಿದ್ದಾರೆ.



