ಹೊಸದಿಗಂತ ಡಿಜಿಟಲ್ ಡೆಸ್ಕ್:
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮದುವೆಗೆ ಇನ್ನೇನು ಎರಡೇ ದಿನ ಬಾಕಿ ಇದೆ. ಈಗಾಗಲೇ ಉದಯಪುರ ತಲುಪಿರುವ ಎರಡೂ ಕಡೆಯ ಕುಟುಂಬಗಳು ಫನ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.
ಮದುವೆಯ ಯಾವ ಶಾಸ್ತ್ರವೂ ಇನ್ನೂ ಆರಂಭವಾಗಿಲ್ಲ. ಎರಡೂ ಕುಟುಂಬಗಳ ರೀತಿ ನೀತಿ ವಿಭಿನ್ನವಾಗಿದ್ದು, ಹೊಂದಾಣಿಕೆ ಮಾಡಿಕೊಳ್ಳೋದಾಗಿ ಗೇಮ್ಸ್ ಆಡಲಾಗ್ತಿದೆ.

ವಿಜಯ್ ತೆಲಂಗಾಣದ ಪದ್ಮಸಾಲಿ ಸಮುದಾಯಕ್ಕೆ ಸೇರಿದವರು, ಇನ್ನು ರಶ್ಮಿಕಾ ಮಂದಣ್ಣ ಕೊಡಗಿನವರು. ಎರಡೂ ಕಡೆಯ ಪದ್ಧತಿಗಳನ್ನು ಸೇರಿಸಿ ಮದುವೆಯನ್ನು ಮಾಡಲಾಗುತ್ತಿದೆ. ಮದುವೆಗೂ ಮುನ್ನ ಎರಡೂ ಕುಟುಂಬದವರು ಸ್ನೇಹಿತರಾಗಲು ಗೇಮ್ಸ್ ಆಯೋಜಿಸಲಾಗಿದೆ. ಈ ಬಗ್ಗೆ ರಶ್ಮಿಕಾ ಹಾಗೂ ವಿಜಯ್ ನಿರಂತರವಾಗಿ ಪೋಸ್ಟ್ ಮಾಡುತ್ತಲೇ ಇದ್ದಾರೆ.
https://www.instagram.com/stories/rashmika_mandanna/3839580003638676574
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹವು ಭಾರಿ ಅದ್ಧೂರಿಯಾಗಿ ನಡೆಯುತ್ತಿದ್ದ ರಾಜಸ್ಥಾನದ ಉದಯಪುರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಅರಾವಳಿ ಬೆಟ್ಟಗಳಲ್ಲಿರುವ ಈ ಐಷಾರಾಮಿ ರೆಸಾರ್ಟ್ನಲ್ಲಿ ಮದುವೆ ಸಮಾರಂಭ ನಡೆಯಲಿದೆ.
ಈ ರೆಸಾರ್ಟ್ ಬರೋಬ್ಬರಿ 117 ಖಾಸಗಿ ವಿಲ್ಲಾಗಳು, ನದಿ-ಕೊಳ, ಖಾಸಗಿ ಹೆಲಿಪ್ಯಾಡ್ ಹೊಂದಿದೆ. ಮದುವೆ ಸಮಾರಂಭದಲ್ಲಿ ವಿಜಯ್ ದೇವರಕೊಂಡ ಅವರ ಕುಟುಂಬದವರು ಅತ್ಯಾಪ್ತ ಸಂಬಂಧಿಗಳು ಮತ್ತು ರಶ್ಮಿಕಾ ಮಂದಣ್ಣ ಅವರ ಕುಟುಂಬದವರು ಮತ್ತು ಅತ್ಯಾಪ್ತ ಸಂಬಂಧಿಗಳು ಹಾಗೂ ಕೆಲವೇ ಕೆಲವು ಸ್ನೇಹಿತರಷ್ಟೆ ಭಾಗಿ ಆಗಿದ್ದಾರೆ. ಮಾರ್ಚ್ 04 ರಂದು ಹೈದರಾಬಾದ್ನ ತಾಜ್ ಕೃಷ್ಣನಲ್ಲಿ ಅದ್ಧೂರಿಯಾಗಿ ರಿಸೆಪ್ಷನ್ ಆಯೋಜನೆ ಮಾಡಲಾಗಿದೆ.



