ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಇಬ್ಬರ ಕೈಯಲ್ಲೂ ಹೊಸ ಎಂಗೇಜ್‌ಮೆಂಟ್ ರಿಂಗ್ ಕಾಣಿಸಿದೆ. ಇಷ್ಟಾದರೂ ನಾವಿಬ್ಬರು ಕಪಲ್ ಎಂದು ರಶ್ಮಿಕಾ-ವಿಜಯ್ ಒಪ್ಪಿಕೊಂಡಿಲ್ಲ.
ಥಾಮ ಸಿನಿಮಾ ಪ್ರಮೋಷನ್ಸ್ ವೇಳೆ ಸಂದರ್ಶನವೊಂದರಲ್ಲಿ ನಟಿ ರಶ್ಮಿಕಾಗೆ ಇಂಟರ್ವ್ಯೂವರ್ ಕಂಗ್ರಾಜುಲೇಷನ್ಸ್ ಹೇಳಿದ್ದಾರೆ. ಒಂದು ಕ್ಷಣ ರಶ್ಮಿಕಾ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆ ಎಂದು ಕೇಳಿದ್ದಾರೆ. ನಗುತ್ತಾ ಇಂಟರ್ವ್ಯೂವರ್ ನಿಮ್ಮ ಪರ್ಫ್ಯೂಮ್ ಲೈನ್‌ಗೆ ಎಂದು ಹೇಳಿದ್ದಾರೆ. ರಶ್ಮಿಕಾ ನಕ್ಕಿದ್ದು, ನೀವು ಯಾವ ವಿಷಯ ಹೇಳಿದ್ರಿ ಗೊತ್ತು ಎಲ್ಲದಕ್ಕೂ ಸೇರಿ ಧನ್ಯವಾದಗಳು ಎಂದಿದ್ದಾರೆ.
ʼcongratulationsʼ ಯಾವುದಕ್ಕೆ ಎಂದು ತಿಳಿಯದೇ ಕಕ್ಕಾಬಿಕ್ಕಿಯಾದ ರಶ್ಮಿಕಾ
