ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ಸೇವಿಕಾ ಸಮಿತಿಯ ಉಡುಪಿ ಜಿಲ್ಲಾ ಕಾರ್ಯವಾಹಿಕಾ ಉಮಾ ಪಡಿಯಾರ್ (ಪ್ರೇಮ ಪಡಿಯಾರ್) ವಿಧಿವಶರಾಗಿದ್ದಾರೆ.
ಅಲ್ಪಕಾಲದ ಅನಾರೋಗ್ಯದಿಮದ ಬಳಲುತ್ತಿದ್ದ ಅವರಿಗೆ 65 ವರ್ಷ ವಯಸ್ಸಾಗಿತ್ತು. ಸೇವಾ ಸಂಗಮ ಟ್ರಸ್ಟ್ ಕುಂದಾಪುರ ಮತ್ತು ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆಯುವ ಲಕ್ಷ್ಮೀ ಪೂಜೆ ಮತ್ತು ದತ್ತಾತ್ರೇಯ ಶಿಶುಮಂದಿರ ಕುಂದಾಪುರ ಇದರ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಸಕ್ರಿಯ ಕಾರ್ಯಕರ್ತರಾಗಿ ಸಮಾಜಮುಖಿಯಾಗಿದ್ದ ಇವರು, ಪತಿ ಯು. ಚಂದ್ರಶೇಖರ್ ಪಡಿಯಾರ್, ಪುತ್ರ ವಿಕ್ರಮ್ ಪಡಿಯಾರ್, ಸೊಸೆ, ಪುತ್ರಿ ನಂದಿತಾ ಗಣೇಶ್, ಅಳಿಯ ಹಾಗೂ ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.