ದಿಗಂತ ವರದಿ ಹಾಸನ :
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಾಸನ ವಿಭಾಗ ಕಾರ್ಯಕಾರಿಣಿ ಸದಸ್ಯರು ಹಾಗೂ ಪ್ರವೀಣ್ ಸೆಲೆಕ್ಷನ್ ಬಟ್ಟೆ ಅಂಗಡಿಯ ಮಾಲೀಕರಾದ ಪಾರಸ್ ಮಲ್ ಜಿ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪಾರಸ್ ಮಲ್ ನಿಧನದಿಂದ ಹಿಂದೂ ಸಂಘಟನೆಯ ಒಬ್ಬ ಮುಖಂಡರನ್ನು ಕಳೆದು ಕೊಂಡಿರುವುದು ಸಂಘಟನೆಗೆ ತುಂಬಲಾರದ ನಷ್ಟ. ಸಂಘದ ಹಿರಿಯರು, ಕಠಿಣ ಸಂಧರ್ಭದ ವೇಳೆ ಹಾಸನದಲ್ಲಿ ಆರ್ ಎಸ್ ಎಸ್ ನ ಸಕ್ರಿಯ ಕಾರ್ಯಕರ್ತರಾಗಿ ತುರ್ತುಪರಿಸ್ಥಿ ಯ ಸಮಯದಲ್ಲಿ ಒಂದೂವರೆ ವರ್ಷಗಳ ಕಾಲ ಜೈಲು ವಾಸ ಅನುಭವಿಸಿ, ರಾಷ್ಟ್ರಕಾರ್ಯದಲ್ಲಿ ಪಾದರಸದಂತೆ ಓಡಾಟ ನಡೆಸುತ್ತ ಸಂಘಟನೆಯ ಮಾರ್ಗದರ್ಶಕರಾಗಿದ್ದರು.
ಮೃತ ಪಾರಸ್ ಮಲ್ ರವರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳಿದ್ದಾರೆ. ಇವರ ನಿಧನಕ್ಕೆ ಹಾಸನ ಜಿಲ್ಲಾ ವಿಶ್ವ ಹಿಂದೂ ಪರಿಷತ್ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ್, ಸಂಘದ ಅನೇಕ ಮುಖಂಡರು ಕಾರ್ಯಕರ್ತರು ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.