ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಘೋಷಣೆಯಾದ ತಕ್ಷಣ ರಾಜ್ಯದಲ್ಲಿ ಅಕ್ರಮ ಹಣದ ದಂಧೆ ಹೆಚ್ಚಾಗಿದೆ. ಜತೆಗೆ ಅಕ್ರಮ ಹಣ ವರ್ಗಾವಣೆಯನ್ನು ಬಯಲಿಗೆಳೆಯಲು ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ. ಹಲವೆಡೆ ಕಂತೆ ಕಂತೆ ನಗದು ಪತ್ತೆಯಾಗಿದ್ದು, ರಾಮನಗರದಲ್ಲಿ ರಾಶಿರಾಶಿ ಸೀರೆಗಳು ಪತ್ತೆಯಾಗಿದೆ.
ಲೋಕಸಭೆ ಚುನಾವಣೆ ವೇಳೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ರಾಮನಗರದ ದ್ಯಾವರಸೇಗೌಡನದೊಡ್ಡಿಯಲ್ಲಿರುವ ಖಾಸಗಿ ಗೋದಾಮಿನಲ್ಲಿ ಭಾರೀ ಪ್ರಮಾಣದ ಸೀರೆಗಳು ಪತ್ತೆಯಾಗಿವೆ. 10,000ಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿವೆ ಎನ್ನಲಾಗಿದೆ.
ಮತದಾರರಿಗೆ ಹಂಚಲು ಸೀರೆಗಳನ್ನು ಸಂಗ್ರಹಿಸಿರುವ ಶಂಕೆಯೂ ಇದೆ. ಜೆಡಿಎಸ್ ಕಾರ್ಯಕರ್ಯರು ದಾಳಿ ಮಾಡಿದ್ದು, ಕಾಂಗ್ರೆಸ್ನವರು ಸೀರೆಗಳನ್ನು ತರಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಇನ್ನು ಸ್ಥಳಕ್ಕೆ ಡಿವೈಎಸ್ಪಿ ದಿನಕರ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.