ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಸ್ನಾ ಗ್ರೂಪ್ ನ ಸ್ಥಾಪಕ ಮತ್ತು ಅಧ್ಯಕ್ಷ ಆರೀಝ್ ಪಿರೋಜ್ಶಾ ಖಂಬಟ್ಟಾ ನಿಧನರಾಗಿದ್ದಾರೆ.
85 ವರ್ಷದ ಖಂಬಟ್ಟಾ ಅವರು ಅರೇಜ್ ಖಂಬಟ್ಟಾ ಬೆನೆವೊಲೆಂಟ್ ಟ್ರಸ್ಟ್ ಮತ್ತು ರಸ್ನಾ ಫೌಂಡೇಶನ್ ನ ಅಧ್ಯಕ್ಷರೂ ಆಗಿದ್ದರು.
‘ಅರೀಜ್ ಫಿರೋಜ್ಶಾ ಅವರು ಭಾರತೀಯ ಕೈಗಾರಿಕೆ, ಉದ್ಯಮ, ಸಾಮಾಜಿಕ ಅಭಿವೃದ್ಧಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಮಾಜ ಸೇವೆಯ ಮೂಲಕವೂ ಪ್ರಸಿದ್ಧರಾಗಿದ್ದರು’ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.
ಖಂಬಟ್ಟಾ ಅವರ ರಾಸ್ನಾ ಹೆಸರುವಾಸಿಯಾಗಿತ್ತು. ಇದು ದೇಶದ 1.8 ಮಿಲಿಯನ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತದೆ.
ಖಂಬಟ್ಟಾ ಅವರು 1970 ರ ದಶಕದಲ್ಲಿ ಹೆಚ್ಚಿನ ವೆಚ್ಚದಲ್ಲಿ ಮಾರಾಟವಾಗುವ ತಂಪು ಪಾನೀಯ ಉತ್ಪನ್ನಗಳಿಗೆ ಪರ್ಯಾಯವಾಗಿ ರಾಸ್ನಾದಲ್ಲಿ ಕೈಗೆಟುಕುವ ತಂಪು ಪಾನೀಯ ಪ್ಯಾಕ್ ಗಳನ್ನು ಸಿದ್ದಪಡಿಸಿದ್ದರು.
ಅವರು ಅವರು ವಾಪಿಝ್ (ವರ್ಲ್ಡ್ ಅಲೈಯನ್ಸ್ ಆಫ್ ಪಾರ್ಸಿ ಇರಾನಿ ಜರ್ತೋಸ್ಟಿಸ್) ನ ಮಾಜಿ ಅಧ್ಯಕ್ಷರಾಗಿದ್ದರು ಮತ್ತು ಅಹಮದಾಬಾದ್ ಪಾರ್ಸಿ ಪಂಚಾಯತ್ ನ ಹಿಂದಿನ ಅಧ್ಯಕ್ಷರಾಗಿದ್ದರು, ಫೆಡರೇಷನ್ ಆಫ್ ಪಾರ್ಸಿ ಝೋರಾಸ್ಟ್ರಿಯನ್ ಅಂಜುಮನ್ಸ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಲ್ಲಿಸಿದ್ದರು.