February 22, 2026
Sunday, February 22, 2026
spot_img

ರವಿ ಬಸ್ರೂರುಗೆ 35 ಲಕ್ಷದ ರೊಲೆಕ್ಸ್ ಗಿಫ್ಟ್: ಟಾಲಿವುಡ್ ಹೀರೋನಿಂದ ವಿಶೇಷ ಸನ್ಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಟಾಲಿವುಡ್ ನಟ-ನಿರ್ದೇಶಕ ವಿಶ್ವಕ್​ಸೇನ್ ಅವರು ರವಿ ಬಸ್ರೂರಿಗೆ ದುಬಾರಿ ರೊಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ವಾಚ್ ಮೌಲ್ಯ ಸುಮಾರು 35 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ.

‘#ಕಲ್ಟ್’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಚಿತ್ರಕ್ಕೆ ರವಿ ನೀಡಿದ ಹಿನ್ನೆಲೆ ಸಂಗೀತದ ಬಗ್ಗೆ ವಿಶ್ವಕ್ ಸೇನ್ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂಸಾತ್ಮಕ ಥೀಮ್ ಹೊಂದಿರುವ ಚಿತ್ರದ ವಾತಾವರಣವನ್ನು ಮ್ಯೂಸಿಕ್ ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸಿದೆ ಎಂದು ಅವರು ಹೇಳಿದರು. ಕೃತಜ್ಞತೆ ಸೂಚಕವಾಗಿ ರವಿ ಅವರಿಗೆ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ:

ಸಾಮಾನ್ಯವಾಗಿ ಹೀರೋ ಅಥವಾ ನಿರ್ದೇಶಕರಿಗೆ ದುಬಾರಿ ಉಡುಗೊರೆ ನೀಡುವ ಪದ್ಧತಿ ಇದ್ದರೂ, ಸಂಗೀತ ನಿರ್ದೇಶಕನಿಗೆ ಈ ರೀತಿ ಸನ್ಮಾನ ಮಾಡಿರುವುದು ಅಪರೂಪವೆಂದು ಚಿತ್ರರಂಗದಲ್ಲಿ ಚರ್ಚೆ ನಡೆಯುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !