ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ಶ್ರೀ ರವಿಶಂಕರ್ ಗುರೂಜಿ ಬಯೋಪಿಕ್ ಬರುತ್ತಿದ್ದು, ಇದಕ್ಕೆ ಪರ್ಫೆಕ್ಟ್ ಎನಿಸುವಂತೆ ನಟ ವಿಕ್ರಾಂತ್ ಮೆಸ್ಸಿ ಅವರನ್ನು ಆರಿಸಲಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರವಿಶಂಕರ್ ಗುರೂಜಿ ಅವರು ಸಾಕಷ್ಟು ಶ್ರಮ ಹಾಕಿದ್ದಾರೆ. ವಿಕ್ರಾಂತ್ ಈ ಪಾತ್ರವನ್ನು ಮಾಡುವುದಕ್ಕೆ ಖುಷಿಪಟ್ಟಿದ್ದಾರೆ. ಅಲ್ಲದೆ ಇದೊಂದು ದೊಡ್ಡ ಜವಾಬ್ದಾರಿ ಎಂದು ಅವರು ಪರಿಗಣಿಸಿದ್ದಾರೆ.
ಇದು ಅವರ ಜೀವನ ಮತ್ತು ವಿಶ್ವ ಇತಿಹಾಸದ ಒಂದು ಪ್ರಮುಖ ಭಾಗ. ಕೊಲಂಬಿಯಾದಲ್ಲಿ ಮತ್ತು ವಿಶ್ವ ಶಾಂತಿಯನ್ನು ಪುನಃಸ್ಥಾಪಿಸುವಲ್ಲಿ ಅವರ ಕೊಡುಗೆಯ ಬಗ್ಗೆ ಭಾರತದಲ್ಲಿ ಅನೇಕರಿಗೆ ತಿಳಿದಿಲ್ಲ ಎಂಬುದು ದುರದೃಷ್ಟಕರ. ಈ ಚಿತ್ರದ ಮೂಲಕ ಆ ವಿಷಯಗಳನ್ನು ಹೇಳುತ್ತಿದ್ದೇವೆ. ಅವರ ಪಾತ್ರವನ್ನು ಮಾಡುತ್ತಿರುವುದೇ ಒಂದು ಗೌರವ. ನಾನು ಎಂದಿಗೂ ಅವರಾಗಲು ಸಾಧ್ಯವಿಲ್ಲ. ಆದರೆ ನಾನು ಅವರಾಗಲು ಪ್ರಯತ್ನಿಸಬಹುದು. ನನ್ನ ಪ್ರಯತ್ನವು ಅವರ ಪ್ರಯತ್ನಗಳಷ್ಟೇ ಪ್ರಾಮಾಣಿಕವಾಗಿರಲಿ ಎಂದು ನಾನು ಆಶಿಸುತ್ತೇನೆ ಎಂದು ವಿಕ್ರಾಂತ್ ಮೆಸ್ಸಿ ಹೇಳಿದ್ದಾರೆ.