ದಿಗಂತ ವರದಿ ಹಾಸನ :
ಕೊಲೆ, ಅತ್ಯಾಚಾರ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚೈಲ್ಡ್ ರವಿಯನ್ನು ಇಂದು ಬೆಳ್ಳಬೆಳ್ಳಂ ಬರ್ಬರ ಹತ್ಯೆ ಮಾಡಲಾಗಿದೆ.
ರವಿ ಅಲಿಯಾಸ್ ಚೈಲ್ಡ್ ರವಿ (45) ಕೊಲೆಯಾದ ಕುಖ್ಯಾತ ರೌಡಿ. ಹಾಸನದ ಹೇಮಾವತಿನಗರದಲ್ಲಿ ಘಟನೆ ನಡೆದಿದೆ. ಕುಡಿಯುವ ನೀರು ತೆಗೆದುಕೊಂಡು ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಟ್ಯಾಕ್ ಮಾಡಿರುವ ಹಂತಕರು ಮಾರಕಾಸ್ತ್ರಗಳಿಂದ ರಸ್ತೆಯಲ್ಲಿ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ಹತ್ಯೆಯಾಗಿರುವ ಚೈಲ್ಡ್ ರವಿ ಕೊಲೆ, ಅತ್ಯಾಚಾರ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.