ಹೊಸ ದಿಗಂತ ಡಿಜಿಟಲ್ ಡೆಸ್ಕ್ :
ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರಿಗೆ ಓದುವ ಅಭ್ಯಾಸ ಇದ್ದರೆ ಗೋಧ್ರಾ ಘಟನೆ ಬಗ್ಗೆ ಖಂಡಿತವಾಗಿಯೂ ಗೊತ್ತಿರುತ್ತದೆ ಎಂದು ವಿಧಾನಪರಿಷತ್ ಪ್ರತಿಪಕ್ಷದ ಮುಖ್ಯಸಚೇತಕ ರವಿಕುಮಾರ್ ಅವರು ಹರಿಪ್ರಸಾದ್ ಅವರ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ್ದಾರೆ.
ಗುರುವಾರ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ರಾಜ್ಯದಲ್ಲಿ ಗೋಧ್ರಾ ಹತ್ಯಾಕಾಂಡದಂತಹ ಮತ್ತೊಂದು ದುರಂತ ಆಗಬಹುದು’ ಎಂಬ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿಕೆ ಖಂಡನೀಯ ಎಂದರು.
ಗೋದ್ರಾದಂತಹ ಘಟನೆ ಮತ್ತೆ ಆಗುವುದಾದರೆ ಸುಮ್ಮನೆ ಕುಳಿತಿರುವುದೇಕೆ? ರಾಜ್ಯದಲ್ಲಿ ನಿಮ್ಮದೇ ಸರಕಾರವಿದೆ. ಸಿಎಂಗೆ ತಿಳಿಸಿ. ಘಟನೆ ನಡೆಯೋದನ್ನು ತಪ್ಪಿಸುವುದು ನಿಮ್ಮ ನೈತಿಕ ಕರ್ತವ್ಯವಲ್ಲವೇ ಎಂದು ರವಿಕುಮಾರ್ ಪ್ರಶ್ನಿಸಿದರು.
ಹರಿಪ್ರಸಾದ್ ಅವರಿಗೆ ಓದುವ ಅಭ್ಯಾಸವಿದ್ದರೆ ಅಂದು ರೈಲಿಗೆ ಬೆಂಕಿ ಕೊಟ್ಟಿದ್ದು ಯಾರು? ಪೆಟ್ರೋಲ್ ಸುರಿದದ್ದು ಯಾರು ಅಂತ ಗೊತ್ತಿರುತ್ತದೆ. ಅಲ್ಪಸಂಖ್ಯಾತರು, ಭಯೋತ್ಪಾದಕರು ರೈಲಿಗೆ ಬೆಂಕಿ ಹಚ್ಚಿದ್ದರು. ಈಗ ಮತ್ತೆ ಆ ಘಟನೆ ಆಗಲಿದೆ ಎಂದಾದರೆ ಯಾಕೆ ಸುಮ್ಮಿನಿದ್ದೀರಿ? ಯಾರಿಗೆ ತಿಳಿಸಬೇಕೋ ತಿಳಿಸಿ ಎಂದು ಆಗ್ರಹಿಸಿದರು.