CINE| ಬಾಲಿವುಡ್‌ ಟಿವಿ ಶೋನಲ್ಲಿ ರವಿತೇಜ ಅಬ್ಬರ, ನಟನ ಕೆಲಸಕ್ಕೆ ಶಾಕ್‌ ಆದ ಜಡ್ಜಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಸ್ ಮಹಾರಾಜ ರವಿತೇಜ `ಟೈಗರ್ ನಾಗೇಶ್ವರರಾವ್’ ಸಿನಿಮಾ ಮೂಲಕ ಅಕ್ಟೋಬರ್ 20 ರಂದು ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ನಿರ್ದೇಶಕ ವಂಶಿ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಯೋಜನೆಯಾಗಿ ನಿರ್ದೇಶಿಸಿದ್ದಾರೆ.

‘ಟೈಗರ್ ನಾಗೇಶ್ವರ ರಾವ್’ ಪ್ಯಾನ್ ಇಂಡಿಯಾ ಚಿತ್ರವಾಗಿರುವುದರಿಂದ ಎಲ್ಲಾ ರಾಜ್ಯಗಳಲ್ಲಿ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ನಟ ರವಿತೇಜ ಬಾಲಿವುಡ್‌ನತ್ತ ಹೆಚ್ಚು ಗಮನಹರಿಸಿದ್ದು, ಅಲ್ಲಿನ ಚಾನಲ್‌ಗಳು, ಸೈಟ್‌ಗಳು ಮತ್ತು ಮಾಧ್ಯಮಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಾಲಿವುಡ್ ಟಿವಿ ಶೋನಲ್ಲಿ ಭಾಗವಹಿಸುವ ಮೂಲಕ ತಮ್ಮ ‘ಟೈಗರ್ ನಾಗೇಶ್ವರ ರಾವ್’ ಚಿತ್ರದ ಪ್ರಚಾರ ಮಾಡುತ್ತಿದ್ದಾರೆ.

ಇದಿಘ ಎಪಿಸೋಡ್‌ನ ಪ್ರೋಮೋ ಬಿಡುಗಡೆಯಾಗಿದ್ದು, ಈ ಪ್ರೋಮೋದಲ್ಲಿ ರವಿತೇಜ ಎಂಟ್ರಿ ಕೊಟ್ಟು ನಾಯಕಿಯರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೇ ಬಿಯರ್ ಬಾಟಲ್ ತೆಗೆದುಕೊಂಡು ಕೈ ಮೇಲೆ ಒಡೆದು ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ವೇದಿಕೆ ಮೇಲಿದ್ದ ತೀರ್ಪುಗಾರರು ದಿಗ್ಬ್ರಾಂತಿಗೊಳಗಾಗಿದ್ದಂತೂ ನಿಜ. ಇನ್ನು ಕೆಲವರು ರವಿತೇಜ ಸಿನಿಮಾ ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ ಎಂಬುದಕ್ಕೆ ಇದೂ ಒಂದು ಉದಾಹರಣೆ ಎನ್ನುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!