ಆರೋಗ್ಯ ಕಾಪಾಡಿಕೊಳ್ಳಲು ಹಸಿಯಾಗಿ ತರಕಾರಿಗಳು ಮತ್ತು ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದು ಒಳ್ಳೆಯದು ಎಂಬ ನಂಬಿಕೆ ಹಲವರಲ್ಲಿದೆ. ಆದರೆ ಎಲ್ಲ ಆಹಾರಗಳನ್ನೂ ಹಸಿಯಾಗಿ ತಿನ್ನುವುದು ಸುರಕ್ಷಿತವಲ್ಲ. ಕೆಲವು ಪದಾರ್ಥಗಳು ಹಸಿಯಾಗಿ ತಿಂದರೆ ದೇಹಕ್ಕೆ ಅಪಾಯಕಾರಿ ವಿಷಕಾರಿ ಅಂಶಗಳು ಸೇರುವ ಸಾಧ್ಯತೆ ಇರುತ್ತದೆ. ಜೊತೆಗೆ ಕೀಟಾಣುಗಳಿಂದ ಸೋಂಕು ತಗುಲುವ ಅಪಾಯವೂ ಹೆಚ್ಚು. ಹೀಗಾಗಿ ಕೆಲವು ಆಹಾರಗಳನ್ನು ತಪ್ಪದೇ ಬೇಯಿಸಿ ಸೇವಿಸುವುದು ಅಗತ್ಯ.
ವೈದ್ಯರ ಪ್ರಕಾರ ಹಸಿಮೊಟ್ಟೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾಗಳು ಇರುವುದರಿಂದ ಅದನ್ನು ಸೇವಿಸಿದರೆ ಫುಡ್ ಪಾಯ್ಸನಿಂಗ್, ವಾಂತಿ, ಡಿಹೈಡ್ರೇಷನ್ ಸಮಸ್ಯೆಗಳು ಕಾಡುತ್ತವೆ.
ಇದೇ ರೀತಿ ಮಶ್ರೂಮ್‌ಗಳಲ್ಲಿ ವಿಷಕಾರಿ ರಾಸಾಯನಿಕಗಳು ಇದ್ದು, ಅವನ್ನು ಹಸಿಯಾಗಿ ತಿಂದರೆ ವಾಂತಿ ಮತ್ತು ಅಜೀರ್ಣ ಸಮಸ್ಯೆಗಳು ಉಂಟಾಗುತ್ತವೆ.
ಗೋಡಂಬಿಯನ್ನು ಹಸಿಯಾಗಿ ತಿಂದರೆ ಅಲರ್ಜಿ ಹಾಗೂ ಉಸಿರಾಟದ ತೊಂದರೆಗಳು ಕಾಣಿಸಿಕೊಳ್ಳಬಹುದು, ಆದ್ದರಿಂದ ಅವನ್ನು ಹುರಿದು ಅಥವಾ ನೀರಿನಲ್ಲಿ ನೆನೆಸಿ ತಿನ್ನುವುದು ಉತ್ತಮ.
ಹಸಿ ಆಲೂಗಡ್ಡೆ ನರಮಂಡಲದ ಮೇಲೆ ಪರಿಣಾಮ ಬೀರುತ್ತದೆ. ಅದೇ ರೀತಿ ಬೀನ್ಸ್‌ನಲ್ಲಿ ಲ್ಯಾಕ್ಟಿನ್ ಎಂಬ ವಿಷಕಾರಿ ಅಂಶವಿದ್ದು, ಅದನ್ನು ಬೇಯಿಸಿದಾಗ ಮಾತ್ರ ಸೇವಿಸಲು ಯೋಗ್ಯವಾಗುತ್ತದೆ.
ಕುಂಬಳಕಾಯಿ ಮತ್ತು ಸೋರೆಕಾಯಿ ಮಿತವಾಗಿ ಹಸಿಯಾಗಿ ಸೇವಿಸಿದರೂ, ಸುರಕ್ಷತೆಯ ದೃಷ್ಟಿಯಿಂದ ಅವನ್ನು ಬೇಯಿಸುವುದು ಶ್ರೇಯಸ್ಕರ.
ಹಸಿಯಾಗಿ ತಿನ್ನುವ ಎಲೆಕೋಸು ಮತ್ತು ಹೂಕೋಸಿನಲ್ಲಿ ಅನೇಕ ಕ್ರಿಮಿ-ಕೀಟಗಳು ಇರುವುದರಿಂದ ಅವನ್ನು ಚೆನ್ನಾಗಿ ತೊಳೆದು, ಬೇಯಿಸಿ ಸೇವಿಸಬೇಕು.
ಬದನೆಕಾಯಿಯಲ್ಲಿ ಸೋಲಾನೈನ್ ಅಂಶವಿದ್ದು, ಹಸಿಯಾಗಿ ತಿಂದರೆ ತಲೆನೋವು, ಡೈರಿಯಾ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಬಹುದು.
ಒಟ್ಟಾರೆ, ಆರೋಗ್ಯಕರ ಆಹಾರ ಸೇವನೆಯ ಹೆಸರಿನಲ್ಲಿ ಹಸಿಯಾಗಿಯೇ ಎಲ್ಲವನ್ನೂ ತಿನ್ನಬಾರದು. ಕೆಲವು ಆಹಾರಗಳು ಬೇಯಿಸಿದಾಗ ಮಾತ್ರ ಸುರಕ್ಷಿತವಾಗುತ್ತವೆ ಮತ್ತು ದೇಹಕ್ಕೆ ಪೋಷಕಾಂಶ ನೀಡುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಂಡು, ಸರಿಯಾದ ರೀತಿಯಲ್ಲಿ ತಯಾರಿಸಿಕೊಂಡು ಸೇವಿಸುವುದು ಆರೋಗ್ಯ ಕಾಪಾಡುವ ಅತ್ಯುತ್ತಮ ಮಾರ್ಗವಾಗಿದೆ.