ಅದ್ದೂರಿಯಾಗಿ ನಡೆಯಿತು ರಾಯರ ಆರಾಧನಾ ಮಹೋತ್ಸವ: ಮಹಾರಥೋತ್ಸವಕ್ಕೆ ಹರಿದು ಬಂತು ಜನಸಾಗರ

ಹೊಸದಿಗಂತ ವರದಿ, ರಾಯಚೂರು :

ಮಂತ್ರಾಲಯ ರಾಘವೇಂದ್ರ ಶ್ರೀಗಳ ೩೫೩ನೇ ಉತ್ತರ ಆರಾಧನಾ ಮಹೋತ್ಸವದ ಅಂಗವಾಗಿ ಜರುಗಿದ ಮಹಾ ರಥೋತ್ಸವ ಶ್ರದ್ಧಾಭಕ್ತಿಯಿಂದ, ಅತ್ಯಂತ ವಿಜೃಂಭಣೆಯಿoದ ಜರುಗಿತು. ಮಹಾ ರಥೋತ್ಸವಕ್ಕೆ ಹರಿದು ಬಂದ ಜನಸಾಗರ.

ಗುರುವಾರ ಜರುಗಿದ ಮಹಾ ರಥೋತ್ಸವಕ್ಕೆ ಗರ್ಭಗುಡಿಯಲ್ಲಿರುವ ಗುರು ರಾಯರಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಜರುಗಿದ ನಂತರ ರಾಯರ ಮೂರ್ತಿಯನ್ನು ಮಹಾ ರಥಕ್ಕೆ ಸಕಲ ವಾದ್ಯ ಹಾಗೂ ಮಂತ್ರ ಘೋಷಗಳೊಂದಿಗೆ ಪಾಲಿಕೆಯಲ್ಲಿ ತರಲಾಯಿತು.

ಮಹಾರಥಕ್ಕೆ ರಾಯರ ಮೂರ್ತಿಯನ್ನು ತರುತ್ತಿದ್ದಂತೆ ನೆರೆದಿದ್ದ ಭಕ್ತರ ಘೋಷಣೆ ಮುಗಿಲು ಮುಟ್ಟುವಂತಿತ್ತು. ಮಠದ ಹೊರಗಡೆ ಇರುವ ವಿಶಾಲವಾದ ಪ್ರಾಂಗಣದಲ್ಲಿ ಅಲುಗಾಡುವುದಕ್ಕೂ ಅವಕಾಶವಿಲ್ಲದಂತೆ ಭಕ್ತರು ನೆರೆದಿದ್ದು ಕಂಡುಬoದಿತು. ಮಠದ ಮುಖ್ಯ ಕಟ್ಟಡ ಮತ್ತು ಪ್ರಾಂಗಣದಲ್ಲಿನ ಎರಡೂ ಬದಿಗಳಲ್ಲಿನ ಕಟ್ಟಡಗಳ ಮೇಲೆ ಕಿಕ್ಕಿರಿದು ಕುಳಿತಿದ್ದ ಬಕ್ತರು ರಥೋತ್ಸವನ್ನು ವೀಕ್ಷಿಸಿ ಧನ್ಯರಾದರು.

ಮಹಾರಥವನ್ನು ಭಕ್ತರು ಮಠದಿಂದ ತಗೆದುಕೊಂಡು ಹೋಗಿ ಮಂತ್ರಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಗುರು ರಾಘವೇಂದ್ರ ಸ್ವಾಮೀಜಿಯವರ ವೃತ್ತದವರೆಗೆ ಎಳೆದುಕೊಂಡು ಹೋಗಿ ಮತ್ತೆ ಮಠಕ್ಕೆ ತರುವಾಗ ಭಕ್ತರ ಉತ್ಸಾಹ ಇಮ್ಮಡಿಯಾದಂತೆ ಕಂಡುಬoದಿತು. ಜೈಕಾರಗಳು ರಾಯರ ಪಾದಕ್ಕೆ ಸಮರ್ಪಣೆ ಆಗುವಂತೆ ಕೇಳಿಬಂದವು.

ಮಹಾರಥದಲ್ಲಿ ಕುಳಿತಿದ್ದ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ಶ್ರೀಪಾದಂಗಳವರು ಭಕ್ತರಿ ಬಣ್ಣವನ್ನು ಎರಚುತ್ತಿದ್ದರು. ಹೂವು ಮತ್ತು ಪ್ರಸಾದವನ್ನು ನೀಡುವ ಮೂಲಕ ಆಶೀರ್ವದಿಸುತ್ತಿದ್ದರು. ನಾಡಿನ ಮೂಲೆ ಮೂಲೆಯಿಂದ ಅಪಾರ ಸಂಖ್ಯೆಯ ಭಕ್ತರು ಹರಿದುಬಂದಿದ್ದರು. ರಥವನ್ನು ಅಪಾರ ಪ್ರಮಾಣದ ಹೂ ಮಾಲೆಗಳಿಂದ ಅಲಂಕರಿಸಲಾಗಿತ್ತು.
ಮಂತ್ರಾಲಯದಲ್ಲಿ ಗುರುವಾರ ದಿನದ ಬಹುತೇಕ ಸಮಯ ಮೋಡಕವಿದ ವಾತಾವರಣ ವಿತ್ತು. ಆವಾಗಾವಾಗ ಪ್ರಖರವಾದ ಬಿಸಿಲು ಕಂಡುಬoದರೂ ಆಗಮಿಸಿದ್ದ ಭಕ್ತರು ಹೆಚ್ಚು ಬಸವಳಿದಂತೆ ಕಂಡುಬರಲಿಲ್ಲವಾದರೂ ಬೆವರು ಮಾತ್ರ ಮೈಯಿಂದ ಧಾರಾಕಾರವಾಗಿ ಇಳಿಯುತ್ತಿತ್ತು. ಕಳೆದ ಎರಡು ದಿನಗಳಿಂದ ಮಂತ್ರಾಲಯ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗಿದ್ದರಿಂದ ವಾತಾವರಣ ತಂಪಿನಿoದ ಕೂಡಿ ಬಹಳ ಹಿತವಾಗಿತ್ತು.

ಮಠಕ್ಕೆ ಹೊಂದಿಕೊoಡು ಮೈದುಂಬಿ ಹರಿಯುತ್ತಿರುವ ತುಂಗಭದ್ರಾ ನದಿಯಲ್ಲಿ ಭಕ್ತರು ಮಿಂದೆದ್ದು ರಾಯರ ದರುಶನಕ್ಕೆ ಆಗಮಿಸುತ್ತಿದ್ದರು. ನದಿಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ಇರುವುದರಿಂದ ಇದಿಗೆ ಇಳಿದ ಭಕ್ತರಿಗೆ ಯಾವುದೇ ರೀತಿಯಿಂದ ತೊಂದರೆ ಆಗದಿರಲಿ ಎಂದು ಪೊಲೀಸ್ ಸಿಬ್ಬಂಧಿ ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದರು ಮತ್ತು ಕಾವಲು ಕಾಯುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!