ಹೊಸದಿಗಂತ ಡಿಜಿಟಲ್ ಡೆಸ್ಕ್:
ತವರಿನಲ್ಲಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳಪೆ ಆಟವಾಡಿದ್ದು, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ163 ರನ್ ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಆರ್ಸಿಬಿ ಕೂಡ ಅದಕ್ಕೆ ತಕ್ಕಂತೆ ಶುರು ಮಾಡಿತು. ಫಿಲ್ ಸಾಲ್ಟ್ 3ನೇ ಓವರ್ನಲ್ಲಿ ಮಿಚೆಲ್ ಸ್ಟಾರ್ಕ್ ಬೌಲಿಂಗ್ಗನಲ್ಲಿ 30 ರನ್ ಸಿಡಿಸಿದರು. ಇವರ ಆರ್ಭಟಕ್ಕೆ ಮೊದಲ ಮೂರು ಓವರ್ಗಳಲ್ಲಿ ಆರ್ಸಿಬಿ ಸ್ಕೋರ್ 53 ಇತ್ತು. ಆದರೆ 4ನೇ ಓವರ್ನಲ್ಲಿ ಫಿಲ್ ಸಾಲ್ಟ್ ರನ್ಔಟ್ ಆಗುವುದರೊಂದಿಗೆ ಆರ್ಸಿಬಿಯ ಆರ್ಭಟ ಅಂತ್ಯವಾಯಿತು.
ಮೊದಲ ವಿಕೆಟ್ಗೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ 3.5 ಓವರ್ಗಳಲ್ಲಿ 61 ರನ್ ಸೇರಿಸಿದರು. ಬಳಿಕ ಪಡಿಕ್ಕಲ್ 8 ಎಸೆತಗಳಲ್ಲಿ 1 ರನ್ಗಳಿಸಿ ಔಟ್ ಆದರೆ ವಿರಾಟ್ ಕೊಹ್ಲಿ 7ನೇ ಓವರ್ನಲ್ಲಿ ವಿಪ್ರಜ್ ನಿಗಮ್ ಬೌಲಿಂಗ್ನಲ್ಲಿ ಸ್ಟಾರ್ಕ್ಗೆ ಕ್ಯಾಚ್ ನೀಡಿ ಔಟ್ ಆದರು.
ನಂತರ ಲಿವಿಂಗ್ಸ್ಟೋನ್ 6 ಎಸೆತಗಳಲ್ಲಿ 3, ಜೀತೇಶ್ ಶರ್ಮಾ 11 ಎಸೆತಗಳಲ್ಲಿ 3, ನಾಯಕ ರಜತ್ ಪಾಟೀದಾರ್ 23 ಎಸೆತಗಳಲ್ಲಿ 25ರನ್, ಕೃನಾಲ್ ಪಾಂಡ್ಯ 18 ಎಸೆತಗಳಲ್ಲಿ 18 ರನ್ಗಳಿಸಿ ಔಟ್ ಆದರು.
ಟಿಮ್ ಡೇವಿಡ್ ಕೊನೆಯ ಎರಡು ಓವರ್ಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 20 ಎಸೆತಗಳಲ್ಲಿ ಅಜೇಯ 37 ರನ್ಗಳಿಸಿ ತಂಡದ ಮೊತ್ತವನ್ನ 163ಕ್ಕೆ ಏರಿಸಿದರು.