IPL | ಇಂದು ಆರ್‌ಸಿಬಿ-ಸಿಎಸ್‌ಕೆ ಹೈ ವೋಲ್ಟೇಜ್‌ ಮ್ಯಾಚ್‌, ರಾಯಲ್‌ ಚಾಲೆಂಜರ್ಸ್‌ ಪ್ಲಾನ್‌ ಏನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಚೆನ್ನೈನ ಎಂ.ಎ.ಚಿದಂಬರಂ ಮೈದಾನ ಇಂದು ಆರ್‌ಸಿಬಿ vs ಚೆನ್ನೈ ನಡುವಿನ ಹೈವೋಲ್ಟೇಜ್‌ ಐಪಿಎಲ್ ಕದನಕ್ಕೆ ಸಾಕ್ಷಿಯಾಗಲಿದೆ.

ಐಪಿಎಲ್‌ನಲ್ಲೇ ಗರಿಷ್ಠ ಅಭಿಮಾನಿ ಬಳಗವನ್ನು ಹೊಂದಿರುವ ತಂಡಗಳಾದ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಕಾದಾಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಈ ಬಾರಿ ಎರಡೂ ತಂಡಗಳು ಆಡಿರುವ ಮೊದಲ ಪಂದ್ಯವನ್ನು ಗೆದ್ದಿವೆ. ಆದರೆ ಚೆನ್ನೈನಲ್ಲಿ ಆರ್‌ಸಿಬಿ ಗೆದ್ದಿರುವುದು 2008ರಲ್ಲಿ ಒಮ್ಮೆ ಮಾತ್ರ. ಉಳಿದ 8 ಪಂದ್ಯಗಳಲ್ಲಿ ಸೋತಿದೆ.

ಈ ಬಾರಿ ಆರ್‌ಸಿಬಿ ತಂಡವನ್ನು ನೋಡುವುದಾದರೆ ಹೆಚ್ಚು ಬಲಿಷ್ಠವಾಗಿದೆ. ಕೊಹ್ಲಿ, ಸಾಲ್ಟ್, ರಜತ್‌ರಿಂದ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಉತ್ತಮವಾಗಿದೆ.‌ ಒಟ್ಟಾರೆ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದು, ಟಿವಿ ಬಿಟ್ಟು ಎದ್ದೇಳೋ ಮಾತೇ ಇಲ್ಲ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!